Advertisement

Bilkis Bano Case: ಗೋಧ್ರಾ ಜೈಲು ಅಧಿಕಾರಿಗಳ ಮುಂದೆ ಶರಣಾದ 11 ಅಪರಾಧಿಗಳು

09:42 AM Jan 22, 2024 | Team Udayavani |

ಗುಜರಾತ್: ಬಿಲ್ಕಿಸ್ ಬಾನೊ ಪ್ರಕರಣದ ಎಲ್ಲಾ 11 ಅಪರಾಧಿಗಳು ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಗೋಧ್ರಾ ಸಬ್ ಜೈಲಿನಲ್ಲಿ ಭಾನುವಾರ ಸಂಜೆ ಶರಣಾದರು, ಸುಪ್ರೀಂ ಕೋರ್ಟ್ ನೀಡಿದ ಗಡುವು ಇಂದು ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಎಲ್ಲ ಅಪರಾಧಿಗಳು ಜೈಲು ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ.

Advertisement

ಅಪರಾಧಿಗಳು ತಡರಾತ್ರಿ ಎರಡು ಖಾಸಗಿ ವಾಹನಗಳಲ್ಲಿ ಸಿಂಗ್ವಾಡ್ ರಂಧಿಕ್‌ಪುರದಿಂದ 11:30 ಕ್ಕೆ ಗೋಧ್ರಾ ಸಬ್ ಜೈಲಿಗೆ ಬಂದು ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ” ಎಂದು ಸ್ಥಳೀಯ ಅಪರಾಧ ವಿಭಾಗದ ಇನ್ಸ್‌ಪೆಕ್ಟರ್ ಎನ್‌ಎಲ್ ದೇಸಾಯಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಜನವರಿ 8 ರಂದು, 2002 ರ ಗೋಧ್ರಾ ನಂತರದ ಗಲಭೆಯ ಸಂದರ್ಭದಲ್ಲಿ ಗುಜರಾತ್ ಸರ್ಕಾರವು ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳಿಗೆ ನೀಡಿದ್ದ ವಿನಾಯಿತಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು, ಅಲ್ಲದೆ ಕೂಡಲೇ ಅಪರಾಧಿಗಳು ಜನವರಿ 22 ರ ಮೊದಲು ಜೈಲು ಅಧಿಕಾರಿಗಳಿಗೆ ಶರಣಾಗುವಂತೆ ಹೇಳಿತ್ತು. ಅದರಂತೆ ಭಾನುವಾರ ತಡರಾತ್ರಿ ಅಪರಾಧಿಗಳು ಜೈಲು ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ.

ಇದನ್ನೂ ಓದಿ: Vijayapura: ದ್ವೇಷ… ಸಂಬಂಧಿಯ ಮೇಲೆಯೇ ಗುಂಡಿನ ದಾಳಿ, ಆರೋಪಿ ಪರಾರಿ

Advertisement

Udayavani is now on Telegram. Click here to join our channel and stay updated with the latest news.

Next