Advertisement

ಬಿಳಿಕೊಳ ತಟದ ಜೈನಮುನಿಗಳ ಬೀಡು

07:59 PM Dec 20, 2019 | Lakshmi GovindaRaj |

ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣ ತಾಲೂಕಿನಲ್ಲಿರುವ ಜೈನರ ಪ್ರಸಿದ್ಧ ಪುಣ್ಯಕ್ಷೇತ್ರ. ಗಂಗರ ಆಳ್ವಿಕೆಯ ಕಾಲದಲ್ಲಿ ಪ್ರಮುಖ ಶ್ರದ್ಧಾಕೇಂದ್ರವಾಗಿದ್ದ ಈ ಊರಿನಲ್ಲಿ ಜೈನಮುನಿಗಳು ಹೆಚ್ಚಾಗಿ ವಾಸಿಸುತ್ತಿದ್ದರು ಎನ್ನುವುದು ಶಾಸನಗಳಿಂದ ತಿಳಿದುಬರುತ್ತದೆ. “ಶ್ರಮಣ ಅಥವಾ ಶ್ರವಣ’ ಎಂದರೆ, ಜೈನಮುನಿ ಎಂದರ್ಥ. “ಬೆಳಗೊಳ’ ಎಂದರೆ ಶುಭ್ರವಾದ ಕೊಳ. ಈ ಊರಿನ ನಡುವೆ ಶುಭ್ರವಾದ ಕೊಳವನ್ನು ಈಗಲೂ ಕಾಣಬಹುದಾಗಿದೆ. ಹೀಗಾಗಿ, ಇಲ್ಲಿಗೆ “ಶ್ರವಣ ಬೆಳಗೊಳ’ ಎಂಬ ಹೆಸರು ಬಂತು ಎನ್ನಲಾಗಿದೆ. ಕಟವಪ್ರ, ವೆಳ್ಗೊಳ, ಧವಳಸರ ತೀರ್ಥ ಎಂಬ ಹೆಸರುಗಳಿಂದಲೂ ಈ ಕ್ಷೇತ್ರ ಪ್ರಸಿದ್ಧಿ ಪಡೆದಿತ್ತು. ಶಿಲ್ಪಿ ಅರಿಷ್ಠನೇಮಿಯಿಂದ ಕೆತ್ತಲ್ಪಟ್ಟ ಬಾಹುಬಲಿಯ 57 ಅಡಿಗಳ ಬೃಹದಾಕಾರದ ವಿಗ್ರಹವಿದ್ದು, ಇದು ಏಷ್ಯಾ ಖಂಡದಲ್ಲೇ ಅತಿ ಎತ್ತರ ಹೊಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next