Advertisement

Biligiriranganabetta: ಕೋಟಿ ವೆಚ್ಚದ ಬಿಳಿಗಿರಿರಂಗನ ದೊಡ್ಡ ರಥಕ್ಕೆ ರಕ್ಷಣೆಯೇ ಇಲ್ಲ!

01:47 PM Sep 13, 2023 | Team Udayavani |

ಯಳಂದೂರು: ಪ್ರಸಿದ್ಧ ಬಿಳಿಗಿರಿರಂಗನಬೆಟ್ಟದಲ್ಲಿ ದೊಡ್ಡ ರಥೋತ್ಸವ ಸೂಕ್ತ ರಕ್ಷಣೆ ವ್ಯವಸ್ಥೆ ಇಲ್ಲದ ಕಾರಣ ಬಿಸಿಲು, ಮಳೆ, ಗಾಳಿ ರಕ್ಷಣೆ ಮಾಡದೇ ಇರುವುದರಿಂದ ಈ ರಥವೂ ಶಿಥಿಲವಾಗುವ ಅಪಾಯವಿದೆ!

Advertisement

ಬಿಳಿಗಿರಿರಂಗನಬೆಟ್ಟವು ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಸ್ಥಳವಾಗಿದ್ದು, ಬೆಟ್ಟವನ್ನು ಚಂಪಕಾರಣ್ಯ, ಶ್ವೇತಾದ್ರಿ, ಬಿಳಿಕಲ್ಲುಬೆಟ್ಟ, ಬಿಳಿಗಿರಿರಂಗನಬೆಟ್ಟ ಎಂದು ಕರೆಯಲಾಗುತ್ತದೆ. ಬೆಟ್ಟದಲ್ಲಿ ಬಿಳಿಗಿರಿರಂಗನಾಥ‌ ಸ್ವಾಮಿಯ ಐತಿಹಾಸಿಕ ದೇಗುಲವಿದ್ದು, ಪ್ರತಿ ವರ್ಷ ದೊಡ್ಡ ಜಾತ್ರೆ ನಡೆಯುತ್ತದೆ. ಕಳೆದ 5 ವರ್ಷಗಳಲ್ಲಿ ದೊಡ್ಡ ಜಾತ್ರೆಯು ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ, ರಥ ದುರಸ್ತಿ ಹಾಗೂ ಕೋವಿಡ್‌ ಸೇರಿದಂತೆ ಹಲವು ಕಾರ ಣಗಳಿಂದ 2017 ರಿಂದ 2021ರ ವರೆಗೂ ಸ್ಥಗಿತ‌ಗೊಂಡಿತ್ತು. ನಂತರ ನೂತನ ರಥ ನಿರ್ಮಾಣಕ್ಕೆ ಸರ್ಕಾರವು 1 ಕೋಟಿ ರೂ. ಬಿಡುಗಡೆ ಮಾಡಿತ್ತು. ನಂತರ ನಂತರ 2022ರಲ್ಲಿ ರಥ ನಿರ್ಮಾಣ ಪೂರ್ಣಗೊಂಡ ನಂತರ ಇದೇ ವರ್ಷ ಏ.16ರ ಶನಿವಾರ ದೊಡ್ಡ ಜಾತ್ರೆ ಜರುಗಿತ್ತು.

ಇದಾದ ಬಳಿಕ ಈ ರಥದ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ದೇವಸ್ಥಾನ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಯಾವುದೇ ಕ್ರಮ ವಹಿಸುತ್ತಿಲ್ಲ ಎಂಬುದು ಇಲ್ಲಿನ ಭಕ್ತರ ದೂರಾಗಿದೆ. ಈ ರಥವನ್ನು ಹಳೆಯ ರಥವಿದ್ದ ಶೆಲ್ಟರ್‌ನ ಕೆಳಗೆ ನಿಲ್ಲಿಸಲಾಗಿದೆ. ಆದರೆ ಇದರಿಂದ ಬಿಸಿಲು ಮಳೆಗೆ ಸೂಕ್ತ ರಕ್ಷಣೆ ಸಿಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ದೂರು ನೀಡಿದರೂ ಕ್ರಮ ವಹಿಸುತ್ತಿಲ್ಲ. ಬಿಳಿಗಿರಿರಂಗನಾಥಸ್ವಾಮಿಯ ಭಕ್ತರೊಬ್ಬರು ರಥವನ್ನು ನಿಲ್ಲಿಸಲು ಸೂಕ್ತ ಶೆಡ್‌ ತಾವು ನಿರ್ಮಿಸಿಕೊಡುವುದಾಗಿ ಒಪ್ಪಿಕೊಂಡಿದ್ದರು. ಆದರೆ ಶೆಡ್‌ ನಿರ್ಮಾಣ ಕಾಮಗಾರಿ ಅಪೂರ್ಣವಾಗಿದೆ.

ತೇರು ಶಿಥಿಲವಾಗಿ 6 ವರ್ಷ ರಥೋತ್ಸವ ನಡೆದಿರಲಿಲ್ಲ : ಕಳೆದ ಬಾರಿ ದೊಡ್ಡರಥವು ಬಿಸಿಲು ಗಾಳಿ ಮಳೆಯಿಂದ ಶಿಥಿಲಗೊಂಡು 6 ವರ್ಷಗಳ ಕಾಲ ದೊಡ್ಡ ತೇರು ನಡೆದಿರಲಿಲ್ಲ. ಜತೆಗೆ ದೇಗುಲದ ಜೀರ್ಣೋದ್ಧಾರ ಸಹ ಬಹಳಷ್ಟು ವಿಳಂಬವಾದ್ದರಿಂದ ಜಿಲ್ಲೆಯ ಸುತ್ತಮುತ್ತಲ್ಲಿನ ರಂಗಪ್ಪನ ಭಕ್ತರಿಗೆ ಬಹಳಷ್ಟು ಬೇಸರವಾಗಿ ಬೆಟ್ಟಕ್ಕೆ ಪ್ರವಾಸಿಗರ ಸಂಖ್ಯೆ ಕಡಿಮೆಗೊಳ್ಳಲು ಕಾರಣವಾಯಿತು. ಇಷ್ಟೆಲ್ಲಾ ಪ್ರಮಾಣದಲ್ಲಿ ಘಟನೆಗಳು ಸಂಭವಿಸಿದರೂ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾವುದೇ ರೀತಿಯ ರಕ್ಷಣೆ ಮುಂದಾಗದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ನಿಲ್ಲಿಸಲು ದಾನಿಗಳ ಸಹಾಯದಿಂದ ಕಟ್ಟಡ ನಿರ್ಮಿಸಲಾಗಿದೆ. ಆದರೆ, ರಥವನ್ನು ನಿಲ್ಲಿಸಲು ಇದರ ತಳ ಭಾಗದಲ್ಲಿ ಭಾಗದಲ್ಲಿ ಸಮಪರ್ಕವಾದ ವ್ಯವಸ್ಥೆ ಇಲ್ಲ. ಇದಕ್ಕೆ ನೆಲಹಾಸಾಗಲಿ, ಗಾರೆಯಾಗಲಿ ಹಾಕಿಲ್ಲ. ಈ ಈ ವಿಷಯವನ್ನು ಇದರ ದಾನಿಗಳಿಗೆ ತಿಳಿಸಲಾಗಿದ್ದು, ಈ ಕೆಲಸ ಪೂರ್ಣಗೊಂಡ ಬಳಿಕ ನಿಲ್ಲಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. ●ಮೋಹನ್‌ ಕುಮಾರ್‌, ಕಾರ್ಯ ನಿರ್ವಾಹಕ ಅಧಿಕಾರಿ, ಬಿ.ರಂ.ಬೆಟ್ಟ 

Advertisement

-ಫೈರೋಜ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next