ಯಳಂದೂರು: ಜಿಲ್ಲೆಯ ಪ್ರಮುಖ ವೈಷ್ಣವ ಧಾರ್ಮಿಕ ಕೇಂದ್ರವಾಗಿರುವ ಬಿಳಿ ಗಿರಿರಂಗನಬೆಟ್ಟದ ಮಹಾ ಸಂಪ್ರೋಕ್ಷಣೆ ಮಾ.29 ರಿಂದ ಏ.2 ರವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ತಿಳಿಸಿದರು.
ದೇವಸ್ಥಾನ ಪುನಾರಂಭ ಸಂಬಂಧಲೋಕೋಪ ಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಹಮ್ಮಿ ಕೊಂಡಿದ್ದ ಅಧಿಕಾರಿಗಳು,ದೇಗುಲದ ಆಡಳಿತ ಮಂಡಲಿ, ಅರ್ಚಕರು, ಸ್ಥಳೀಯಜನಪ್ರತಿನಿಧಿಗಳ ಸಭೆ ನಡೆಸಿ ಮಾಹಿತಿ ನೀಡಿದರು. ನೆಲಹಾಸುಕಾಮಗಾರಿ ಸದ್ಯಕ್ಕೆ ಪೂರ್ಣಗೊಳ್ಳದು. ಆದರೆ, ದೇಗುಲದ ಪ್ರಾಂಗಣದ ಸುತ್ತ ಕಾಂಕ್ರೀಟ್ ಹಾಕುವ ಕೆಲಸ ಅಂದಿನವರೆಗೆ ಪೂರ್ಣ ಗೊಳ್ಳುತ್ತದೆ. ಇಲ್ಲೇ ದೇಗುಲದ ಮಹಾ ಸಂಪ್ರೋಕ್ಷಣೆಗೆ ಆಗಮಿಕರು ನೀಡಿ ರುವ ದಿನಾಂಕ ಶುಭಕರಾಗಿದೆ. ಹೀಗಾಗಿ ಸಂಪ್ರೋಕ್ಷಣೆಯ ದಿನಾಂಕ ದಲ್ಲಿ ಇದ್ದ ಗೊಂದಲ ಗಳು ಬಗೆ ಹರಿದಿದ್ದು ಇದು ಅಂತಿಮವಾಗಿದೆ.
ಭಕ್ತರ ಗೊಂದಲಕ್ಕೆ ತೆರೆ: ಮಾ.6ರಂದು ಬೆಟ್ಟಕ್ಕೆ ಭೇಟಿನೀಡಿ ನೆಲಹಾಸು ಕಾಮಗಾರಿಗೆ ಚಾಲನೆ ನೀಡಿದ್ದಶಾಸಕ ಎನ್. ಮಹೇಶ್, ಈ ಕಾಮಗಾರಿ ಮುಗಿಯುವುದು ವಿಳಂಬವಾಗುವ ಕಾರಣ ಏ.10ರನಂತರ ಸಂಪ್ರೋಕ್ಷಣೆ ದಿನಾಂಕ ನಿಗದಿ ಮಾಡಲಾಗುವುದು ಎಂದು ತಿಳಿಸಿದ್ದರು. ಇದರಿಂದಭಕ್ತರಲ್ಲಿ ಗೊಂದಲ ಏರ್ಪಟ್ಟಿತ್ತು. ಇದಕ್ಕೆ ಪೂರ್ಣವಿರಾಮ ಹಾಕಿದ ಜಿಲ್ಲಾಧಿಕಾರಿ, ಮಾ.29ರಿಂದ ಏ. 2ರ ವರೆಗೆ ಜೀರ್ಣೋದ್ಧಾರ ಕಾಮಗಾರಿ ಮುಗಿದ ನಂತರ ನಡೆಯುವ ಸಾಂಪ್ರದಾಯಿಕ, ಹೋಮ, ಹವನ, ಯಜ್ಞ, ಯಾಗಗಳ ಜೊತೆಗೆ ಮಹಸಂಪ್ರೋ ಕ್ಷಣೆ ನಡೆಯಲಿದೆ ಎಂದು ಮಾಹಿತಿ ನೀಡಿರುವುದು ಭಕ್ತರಲ್ಲಿ ಮೂಡಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ. ಮತ್ತೂಂದು ಸಭೆ: ಕಾರ್ಯಕ್ರಮವನ್ನು ಯಾವ ರೀತಿ ಆಯೋಜನೆ ಮಾಡಬೇಕು. ಇದರಲ್ಲಿ ಭಕ್ತರಿಗೆ ಪ್ರವೇಶ ಹೇಗೆ, ಸಾರ್ವಜನಿಕರು ಭಾಗವಹಿಸಲು ಅವಕಾಶ ಇದೆಯೇ ಇಲ್ಲವೆ ಎಂಬುದರ ಬಗ್ಗೆ ಮತ್ತೂಂದು ಸಭೆಯನ್ನು ಮಾಡಿ ಮಾಹಿತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಸಭೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆಲ್ದೂರು ರಾಜಶೇಖರ್, ತಹಶೀಲ್ದಾರ್ ಸಲಾಂ ಹುಸೇನ್, ದೇವಸ್ಥಾನದ ಇಒ ಮೋಹನ್‌ಕುಮಾರ್ ಪಾರುಪತ್ತೆದಾರ ರಾಜು, ಆರ್ಚಕರಾದರವಿ, ನಾಗರಾಜಭಟ್ಟ, ಆರ್‌ಎಫ್ಒ ಲೋಕೇಶ್‌ಮೂರ್ತಿ, ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯರಾದ ವೇದಮೂರ್ತಿ, ಶಿವಮ್ಮ, ಚಿಕ್ಕರಾಜುಲೋಕೋಪಯೋಗಿ, ನಿರ್ಮಿತಿ ಕೇಂದ್ರದ ಜೆಇಗಳು ಹಾಜರಿದ್ದರು.
ದೊಡ್ಡ ತೇರಿಗೂ ಸಂಪ್ರೋಕ್ಷಣೆ :
ದೇಗುಲ ಪುನಾರಂಭ ಸಂಬಂಧ ಸಂಪ್ರೋಕ್ಷಣೆಯ ಹೋಮ ಹವನಗಳಿಗೆ ಬೇಕಾಗುವ ಎಲ್ಲಾ ಯಜ್ಞಕುಂಡಗಳ ನಿರ್ಮಾಣ ಸೇರಿದಂತೆ ಎಲ್ಲಾ ಸಿದ್ಧತೆಗಳು ಆದಷ್ಟು ಬೇಗಪೂರ್ಣಗೊಳ್ಳಬೇಕು. ಅಲ್ಲದೆ ಇಷ್ಟರೊಳಗೆ ದೊಡ್ಡ ರಥದ ಕಾಮಗಾರಿ ಕೂಡಪೂರ್ಣಗೊಳ್ಳಲಿದೆ. ಏ.02ರಂದೇ ಇದಕ್ಕೂಪೂಜೆ ಸಲ್ಲಿಸಿ ಸಂಪ್ರೋಕ್ಷಣೆ ನಡೆಸಲಾಗುವುದು.ದಾನಿಗಳಿಂದ ಶೆಡ್ ನಿರ್ಮಾಣಕ್ಕೆ ಮುಂದೆಬಂದಿದ್ದು ಇದನ್ನು ಆದಷ್ಟು ಬೇಗಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು.ಅಲ್ಲದೆ ದೇಗುಲಕ್ಕೆ ಬೇಕಾದ ಯುಪಿಎಸ್, ವಿದ್ಯುತ್ ಸಂಪರ್ಕಕ್ಕೆ ಬೇಕಾಗುವ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರವಿ ತಾಕೀತು ಮಾಡಿದರು.