ದೇಗಲದ ಆವರಣದಲ್ಲಿ 25 ಲಕ್ಷ ರೂ.ವೆಚ್ಚದಲ್ಲಿ 8 ಅಡಿ ಅಗಲದಲ್ಲಿ ಸುತ್ತಲೂ 3 ಇಂಚು ದಪ್ಪದ ಕಲ್ಲುಗಳನ್ನು ಬಳಕೆ ಮಾಡಲಾಗಿತ್ತು. ಇಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಯುವುದರಿಂದ ಚಿಕ್ಕ ರಥೋತ್ಸವ ಜರುಗುವ ಸಮಯದಲ್ಲಿ ಕಲ್ಲು ಒಡೆದು ತೊಂದರೆಯಾಗುವ ಸಾಧ್ಯತೆಗಳು ಇದೆ ಎಂದು ಭಕ್ತರು ಹಾಗೂ ಸಾರ್ವಜನಿಕರು ದೂರಿದ್ದರು. ಈ ಬಗ್ಗೆ ಎಚ್ಚೆತ್ತುಗೊಂಡ ಇಲಾಖೆ ಕಾಮಗಾರಿಯನ್ನು ಸ್ಥಗಿತಗೊಳಿಸಿತ್ತು. ಮತ್ತೆ 1 ಕೋಟಿ ರೂ. ವೆಚ್ಚದಲ್ಲಿ 6 ಇಂಚು ದಪ್ಪ ಇರುವ ನೆಲಹಾಸು ಕಲ್ಲುಗಳನ್ನು ಬಳಸಿಕೊಂಡು ಕಾಮಗಾರಿಗೆ ಚಾಲನೆ ನೀಡಿತ್ತು.
Advertisement
ಆದರೆ, ಇದನ್ನು ಬಿಟ್ಟು ಇದರ ನಡುವೆ 3 ಇಂಚಿನ ಕಲ್ಲುಗಳನ್ನು ಇದರ ಮಧ್ಯ ಬಳಸಿಕೊಂಡು ಕಾಮಗಾರಿ ನಡೆಯುತ್ತಿದ್ದು ಇದು ಚರ್ಚೆಗೆ ಗ್ರಾಸವಾಗಿದೆ.
ಮಂಡಳಿಯನ್ನು ಕೇಳಿದರೆ ತಾಂತ್ರಿಕ ವಿಷಯಗಳ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂಬ ಉತ್ತರ ನೀಡುತ್ತಾರೆ ಸಂಕ್ರಾಂತಿಯಂದು ನಡೆಯುವ ಚಿಕ್ಕ ರಥೋತ್ಸವವು ದೇಗುಲದ ಆವರಣದಲ್ಲೇ ನಡೆಯುತ್ತದೆ. ಈ ರಥ ದೇಗುಲದ ಸುತ್ತ ಚಲಿಸುತ್ತದೆ. ಗುಣಮಟ್ಟದ ಕಲ್ಲುಗಳನ್ನು ಹಾಕದಿದ್ದಲ್ಲಿ ಇದು ಒಡೆಯುವ ಸಾಧ್ಯತೆಗಳು ಅಧಿಕವಾಗಿರುತ್ತದೆ. ಅಲ್ಲದೆ ನೆಲಹಾಸಿಗೆ ಮುಂಚೆ ಹಾಕುವ ಕಲ್ಲು ಕಾಂಕ್ರಿಟ್ ಕೂಡ ಇಲ್ಲಿ ಸರಿಯಾಗಿ ಬಳಕೆ ಮಾಡಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ. ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಈ ಕಾಮಗಾರಿಯನ್ನು ಗುಣಮಟ್ಟದಿಂದ ನಡೆಸಬೇಕು ಎಂಬುದು ಭಕ್ತರ ಆಗ್ರಹವಾಗಿದೆ. ಇದನ್ನೂ ಓದಿ : ವಿಧಾನಪರಿಷತ್ ಚುನಾವಣೆ : ಸೇಡು ತೀರಿಸಿಕೊಳ್ಳಲು ಜೆಡಿಎಸ್ ತವಕ
Related Articles
ದೇಗುಲದ ಪ್ರಾಂಗಣದಲ್ಲಿ ನೆಲಹಾಸು ಕಾಮಗಾರಿ ನಡೆಯುತ್ತಿದೆ. ಈ ಹಿಂದೆ ತಾತ್ಕಾಲಿಕವಾಗಿ 25 ಲಕ್ಷ ರೂ. ವೆಚ್ಚದಲ್ಲಿ ಹಾಕಲಾಗಿದ್ದ ಕಲ್ಲುಗಳನ್ನೇ ಇದಕ್ಕೆ ಮತ್ತೆ ಬಳಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಹೊಸದಾಗಿ 1 ಕೋಟಿ ರೂ. ಬಿಡುಗಡೆಯಾಗಿದ್ದರೂª 6 ಇಂಚು ದಪ್ಪದ ಕಲ್ಲುಗಳ ನಡುವೆ ಕಳಪೆ ಗುಣಮಟ್ಟದ ಕಲ್ಲುಗಳನ್ನು ಬಳಸಲಾಗುತ್ತಿದ್ದು ಇದರಲ್ಲಿ ಅಧಿಕಾರಿ, ಸಿಬ್ಬಂದಿ ವರ್ಗ ಶಾಮೀಲಾಗಿರುವ ಅನುಮಾನವಿದೆ. ಕೂಡಲೇ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಬಗ್ಗೆ ಕ್ರಮ ವಹಿಸಬೇಕಿದೆ ಎಂದು ಭಕ್ತರಾದ ರಂಗಸ್ವಾಮಿ ಸೇರಿದಂತೆ ಮತ್ತಿತರರು ಆಗ್ರಹಿಸಿದ್ದಾರೆ.
Advertisement