Advertisement

ಬಿಳಿಗೆರೆ ಗ್ರಾಮವನ್ನು ಅಗ್ರಿಟೂರಿಸಂ ಯೋಜನೆಯಡಿ ಪ್ರವಾಸಿ ಕೇಂದ್ರ ಮಾಡಿ

10:44 AM Sep 10, 2020 | sudhir |

ತಿಪಟೂರು: ಗ್ರಾಮ ಭಾರ‌ತದಲ್ಲೊಂದು ಮಾದರಿ ಗ್ರಾಮವಾಗಿರುವ ತಾಲೂಕಿನ ಬಿಳಿಗೆರೆ ಗ್ರಾಮ ಬಿಳಿಗೆರೆಯನ್ನು ಅಗ್ರಿಟೂರಿಸಂ ಯೋಜನೆಯಡಿ ಪ್ರವಾಸಿ ಕೇಂದ್ರವೆಂದು ಘೋಷಿಸಿ ಅಭಿವೃದ್ಧಿಪಡಿಸಬೇಕೆಂದು ತಾಲೂಕು ಕೃಷಿಕ ಸಮಾಜ¨ ‌ ಜಿಲ್ಲಾ ಪ್ರತಿನಿಧಿ ಕೆ.ಎಸ್‌.ಸದಾಶಿವಯ್ಯ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪುರ ಯೋಜನೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರ ಗ್ರಾಮೀಣಾಭಿವೃದ್ಧಿಯ ಅಮೋಘ ಪರಿಕಲ್ಪನೆಯಾಗಿದ್ದು, ನಗರ ಪ್ರದೇಶಗಳಿಗೆ ನೀಡುವ ಎಲ್ಲಾ ರೀತಿಯ ಮೂಲಭೂತ ಸೌಕ ‌ರ್ಯಗಳ ‌ನ್ನು ಗ್ರಾಮೀಣ ಪ್ರದೇಶಗಳ ಜೊ‌ತೆಗೆ ಒದಗಿಸುವ ‌ ಕಲಾಂರ ಮಹತ್ವಾಕಾಂಕ್ಷೆಯ ಚಿಂತನೆ ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ಸಾಕಾರಗೊಂಡಿದೆ.

Advertisement

ಗ್ರಾಮದಲ್ಲಿ ಅಂಗನವಾಡಿ ಕೇಂದ್ರದಿಂದ ಹಿಡಿದು ಸರ್ಕಾರಿ ಪ್ರಾಥಮಿಕಶಾಲೆ,ಪ್ರೌಢಶಾಲೆ,ಬಿ.ಸಿ.ಎಂ ಹಾಸ್ಟೆಲ್‌ ಹಾಗೂ ಜೂನಿಯರ್‌ ಕಾಲೇಜ್‌ವರಗೆ ಶೈಕ್ಷಣಿಕ ಸೌಲಭ್ಯವಿದೆ. ಸರ್ಕಾರಿ ಗ್ರಂಥಾಲಯ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ , ಪಶು ಆಸ್ಪತ್ರೆ, ಬ್ಯಾಂಕ್‌, ವಿದ್ಯುತ್‌ ಶಕ್ತಿ ಸೆಕ್ಷನ್‌ ಆಫೀಸ್‌, ಅಂಚೆ ಕಚೇರಿ, ರೈತ ಸಂಪರ್ಕ ಕೇಂದ್ರ, ರೈತೋಪಕರ‌ಣಗಳ ಬಾಡಿಗೆ ಕೇಂದ್ರ , ಗ್ರಾಮೀಣ ಕುಡಿಯುವ ನೀರಿನ ಘಟಕ, ಪ್ರಾಥಮಿಕ ಕೃಷಿ ಸಹಕಾರ ಸಂಘ, ಹಾಲು ಉತ್ಪಾದಕರ ಸಹಾಕಾರ ಸಂಘ, ಬಯಲು ರಂಗ ಮಂದಿರ, ಸಾರ್ವಜನಿಕ ವಿದ್ಯಾರ್ಥಿ ನಿಲಯ, ಗ್ರಾಮೀಣ ಅನಿಲ ವಿತ‌ರಣಾ ಕೇಂದ್ರ, ಗ್ರಾಪಂ ಕಾರ್ಯಾಲಯ ಸೇರಿದಂತೆ ಗ್ರಾಮಸೌಧದ ಸೌಲಭ್ಯಗಳಿವೆ.

ರಾಜ್ಯದಲ್ಲಿ ಕೃಷಿ ಹಾಗೂ ಗ್ರಾಮೀಣಾ ಭಿವೃದ್ಧಿಗೆ ಪ್ರವಾಸೋದ್ಯಮ ಸ್ಪರ್ಶ ನೀಡಲು ಅಗ್ರಿ ಟೂರಿಸಂ ಯೋಜನೆ ರೂಪಿಸಲು ರಾಜ್ಯ ಸರ್ಕಾರ ಚಿಂತಿಸುತ್ತಿದ್ದು, ಮುಖ್ಯಮಂತ್ರಿಗ ‌ಳು ಬಿಳಿಗೆರೆಯನ್ನು ಪ್ರವಾಸಿ ಕೇಂದ್ರವೆಂದು ಘೋಷಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕೆಂದು ಕೆ.ಎಸ್‌.ಸದಾಶಿವಯ್ಯ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next