Advertisement
ಬಿಳಿನೆಲೆ-ನೆಟ್ಟಣದ ನಡುವೆ ಇರುವ ಬಿಳಿನೆಲೆ ಸೇತುವೆಯ ಕಾಮಗಾರಿ ಆರಂಭಗೊಂಡು 2 ವರ್ಷಗಳು ಪೂರ್ತಿ ಯಾಗಿವೆ. 3 ಕೋಟಿ ರೂ. ವೆಚ್ಚದಲ್ಲಿ ಸೇತುವೆ, ಸಂಪರ್ಕ ರಸ್ತೆ ನಿರ್ಮಾಣ ವಾಗುತ್ತಿದೆ. ಆ ಪೈಕಿ 2.75 ಕೋಟಿ ರೂ. ವೆಚ್ಚದಲ್ಲಿ ಸೇತುವೆಯ ಕಾಮಗಾರಿ ನಡೆದಿದ್ದು, ಸಂಪರ್ಕ ರಸ್ತೆಯ ಕಾಮಗಾರಿಗೆ 25 ಲಕ್ಷ ರೂ. ವ್ಯಯ ವಾಗಲಿದೆ.
ಮುಳುಗು ಸೇತುವೆಗಳಿದ್ದ ಸುಬ್ರಹ್ಮಣ್ಯದ ಕುಮಾರಧಾರಾ, ನೆಟ್ಟಣ, ಮರ್ದಾಳ ಬಳಿಯ ಬಜಕೆರೆ, ಕುಂತೂರು ಸೇತುವೆ, ಕೆಮ್ಮಾರ ಸೇತುವೆಗಳ ಪಕ್ಕ ದಲ್ಲಿಯೇ ಹೊಸ ಸರ್ವಋತು ಸೇತುವೆ ಗಳು ನಿರ್ಮಾಣವಾಗಿ ವಾಹನಗಳು ಸಂಚರಿಸುತ್ತಿವೆ. ಇದೀಗ ಕಡಬ ಬಳಿಯ ಹೊಸಮಠ ಸೇತುವೆ ಹಾಗೂ ಬಿಳಿನೆಲೆ ಸೇತುವೆ ಫೆಬ್ರವರಿ ಮಾಸಾಂತ್ಯದಲ್ಲಿ ವಾಹನ ಸಂಚಾರಕ್ಕೆ ತೆರೆದುಕೊಳ್ಳಲಿದೆ. ಇನ್ನು ಬಾಕಿ ಉಳಿದಿರುವ ಬಿಳಿನೆಲೆ-ಕೈಕಂಬದ ನಡುವಿನ ಸೇತುವೆ ಮಾತ್ರ. ಅಲ್ಲಿಯೂ ನೂತನ ಸೇತುವೆ ನಿರ್ಮಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರ ಅನುದಾನ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿ ಇದೆ. ಮುಳುಗು ಸೇತುವೆಗಳಿಗೆ ಮುಕ್ತಿ
ದಕ್ಷಿಣ ಭಾರತದ ಅತೀ ದೊಡ್ಡ ಯಾತ್ರಾಸ್ಥಳ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವನ್ನು ಉಪ್ಪಿನಂಗಡಿ – ಕಡಬ ಮೂಲಕ ಸಂಪರ್ಕಿಸುವ ರಾಜ್ಯ ಹೆದ್ದಾರಿ ಯಲ್ಲಿ ಹಳೆಯ ಮುಳುಗು ಸೇತುವೆಗಳೇ ಇದ್ದುದರಿಂದ ಮಳೆಗಾಲದಲ್ಲಿ ನೆರೆ ನೀರು ಉಕ್ಕಿ ಸೇತುವೆಗಳ ಮೇಲೆ ಹರಿದು ವಾಹನ ಸಂಚಾರಕ್ಕೆ ಅಡ್ಡಿಯುಂಟಾ ಗುತ್ತಿದ್ದುದರಿಂದಾಗಿ ಯಾತ್ರಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿತ್ತು. ಇದೀಗ ಹೆಚ್ಚಿನ ಸೇತುವೆಗಳು ಸರ್ವಋತು ಸೇತುವೆಗಳಾಗಿ ನಿರ್ಮಾಣಗೊಂಡಿವೆ.
Related Articles
ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೃಹತ್ ಸೇತುವೆಗಳಾದ ಸುಬ್ರಹ್ಮಣದ ಕುಮಾರಧಾರಾ ಹಾಗೂ ಶಾಂತಿಮೊಗರು ಸೇತುವೆ ನಿರ್ಮಾಣ ಮುಗಿದು ಸಂಚಾರಕ್ಕೆ ಮುಕ್ತವಾಗಿವೆ. ಕಡಬದ ಹೊಸಮಠ ಸೇತುವೆ ಹಾಗೂ ಬಿಳಿನೆಲೆ ಸೇತುವೆಯ ಕಾಮಗಾರಿ ಬಹುತೇಕ ಮುಗಿದಿದೆ. ಫೆಬ್ರವರಿ ಅಂತ್ಯದೊಳಗೆ ಸೇತುವೆಯ ಎಲ್ಲ ಕೆಲಸ ಮುಗಿದು ವಾಹನ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿನ ಮುಳುಗು ಸೇತುವೆಗಳ ಪೈಕಿ ಕೈಕಂಬ ಸೇತುವೆ ಮಾತ್ರ ಬಾಕಿ ಇದ್ದು, ಅಲ್ಲಿ ನೂತನ ಸೇತುವೆ ನಿರ್ಮಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದೆ.
– ಎಸ್. ಅಂಗಾರ,
ಸುಳ್ಯ ಶಾಸಕರು
Advertisement
ನಾಗರಾಜ್ ಎನ್.ಕೆ.