Advertisement

Pakistan: ಬಿಲಾವಲ್‌ ಭುಟ್ಟೊ PPP ಪ್ರಧಾನಿ ಅಭ್ಯರ್ಥಿ

08:40 PM Jan 04, 2024 | Pranav MS |

ಲಾಹೋರ್‌: ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿಯು(ಪಿಪಿಪಿ) ಬಿಲಾವಲ್‌ ಭುಟ್ಟೊ ಜರ್ದಾರಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದೆ. ಫೆ.8ರಂದು ಪಾಕಿಸ್ತಾನದಲ್ಲಿ ಮತದಾನ ನಡೆಯಲಿದೆ. ಇದರ ನಿಮಿತ್ತವಾಗಿ ಪಿಪಿಪಿ ಕೇಂದ್ರ ಕಾರ್ಯಕಾರಿ ಸಮಿತಿಯು ಗುರುವಾರ ಸಭೆ ನಡೆಸಿತು.

Advertisement

ಈ ವೇಳೆ ಪಕ್ಷದ ಪ್ರಣಾಳಿಕೆ ಕುರಿತು ಚರ್ಚೆ ನಡೆಸಲಾಯಿತು. ಪಿಪಿಪಿ ಚೇರ್‌ವೆುನ್‌ ಬಿಲಾವಲ್‌ ಭುಟ್ಟೊ ಜರ್ದಾರಿ(35) ಅವರು ಪಾಕ್‌ ಮಾಜಿ ಪ್ರಧಾನಿ ಬೆನಜಿರ್‌ ಭುಟ್ಟೋ ಅವರ ಪುತ್ರ. ಇವರು ಲಾಹೋರ್‌ ಕ್ಷೇತ್ರದಿಂದ ಪಾಕಿಸ್ತಾನ್‌ ಮುಸ್ಲಿಂ ಲೀಗ್‌ ನವಾಜ್‌(ಪಿಎಂಎಲ್‌ಎನ್‌) ನಾಯಕ ಶಯಿಸ್ತಾ ಪರ್ವೇಜ್‌ ಮಲ್ಲಿಕ್‌ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next