Advertisement

ಅಲೆಮಾರಿ ಕುಟುಂಬಗಳಿಗೆ ಆಹಾರ ಧಾನ್ಯ-ಮಾಸ್ಕ್ ವಿತರಣೆ

11:44 AM Apr 08, 2020 | Team Udayavani |

ಬೀಳಗಿ: ಪಟ್ಟಣದಲ್ಲಿರುವ ಅಲೆಮಾರಿ ಕುಟುಂಬಗಳ ಜೋಪಡಿ ಸ್ಥಳಕ್ಕೆ ಸೋಮವಾರ ಜಿಪಂ ಸಿಇಒ ಗಂಗೂಬಾಯಿ ಮಾನಕರ ಭೇಟಿ ನೀಡಿ, ಎಲ್ಲ ಕುಟುಂಬಗಳಿಗೆ ಆಹಾರ ಧಾನ್ಯ, ಮಾಸ್ಕ್ ಹಾಗೂ ಐದು ಜನಕ್ಕೆ ನರೇಗಾ ಜಾಬ್‌ ಕಾರ್ಡ್‌ ಮತ್ತು ಎರಡು ಕುಟುಂಬಕ್ಕೆ ಪಡಿತರ ಚೀಟಿ ನೀಡಿದರು.

Advertisement

ಬಳಿಕ ಮಾತನಾಡಿದ ಅವರು, ಗುಡಿಸಲಲ್ಲಿ ವಾಸಿಸುತ್ತಿರುವ ಇಲ್ಲಿನ ಅಲೆಮಾರಿ ಕುಟುಂಬಗಳಿಗೆ ಹೆಗ್ಗೂರ ಗ್ರಾಪಂನವರು 2 ಕೆಜಿ ಅಕ್ಕಿ, 1 ಕೆಜಿ ಬ್ಯಾಳಿ ಹಾಗೂ 1 ಕೆಜಿ ಸಕ್ಕರೆ ನೀಡಿದ್ದಾರೆ. ಈಗಾಗಲೇ ಐದು ಜನರಿಗೆ ಉದ್ಯೋಗ ಖಾತ್ರಿ ಜಾಬ್‌ ಕಾರ್ಡ್‌ ನೀಡಲಾಗಿದ್ದು, ದಿನಕ್ಕೆ 275 ರೂ. ವೇತನ ದೊರೆಯಲಿದೆ. ಲಾಕ್‌ಡೌನ್‌ ಅವಧಿ  ಮುಗಿದ ನಂತರವೂ ಮತದಾರರ ಗುರುತಿನ ಚೀಟಿ ಹಾಗೂ ಆಧಾರ್‌ ಹೊಂದಿರುವ ಎಲ್ಲ ಕುಟುಂಬಗಳಿಗೂ ಪಡಿತರ ಚೀಟಿ ಮತ್ತು ಯಾರು ಉದ್ಯೋಗ ಮಾಡಲು ಬಯಸುತ್ತಾರೋ ಅಂತವರಿಗೆ ನರೇಗಾ ಜಾಬ್‌ ಕಾರ್ಡ್‌ ಕೂಡ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ತಹಶೀಲ್ದಾರ್‌ ಭೀಮಪ್ಪ ಅಜೂರ, ತಾಪಂ ಇಒ ಎಂ.ಕೆ. ತೊದಲಬಾಗಿ, ಪಪಂ ಮುಖ್ಯಾ ಕಾರಿ ದೇವೀಂದ್ರ ಧನಪಾಲ, ಹೆಗ್ಗೂರ ಗ್ರಾಪಂ ಅಧ್ಯಕ್ಷೆ ಇಂದ್ರವ್ವ ಮದಗುಣಕಿ, ಪಿಡಿಒ ಬಿ.ಬಿ.ಇಟಗಿ, ಆಹಾರ ಶಿರಸ್ತೇದಾರ ಡಿ.ಜಿ. ಪೂಜಾರಿ, ಗ್ರಾಪಂ ಸದಸ್ಯ ಕಿರಣ ಬಾಳಗೋಳ, ಪ್ರಕಾಶ ಲಮಾಣಿ, ಈರಣ್ಣ ಗಿಡ್ಡಪ್ಪಗೋಳ, ಮಲ್ಲಯ್ಯ ಸುರಗಿಮಠ, ವಿಠ್ಠಲ ಗಡ್ಡದ, ನಿಂಗಪ್ಪ ದಂಧರಗಿ, ಮುತ್ತು ಬೋರ್ಜಿ ಇತರರು ಇದ್ದರು. ಅಲೆಮಾರಿ ಕುಟುಂಬಗಳ ಸ್ಥಿತಿ ಕುರಿತು ಉದಯವಾಣಿಯಲ್ಲಿ ವರದಿ ಪ್ರಕಟಗೊಂಡಿತ್ತು. ವರದಿಗೆ ಸ್ಪಂದಿಸಿದ ಜಿಪಂ ಸಿಇಒ ನೆರವು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next