Advertisement

ಮೋದಿ ದೇಶ ಕಾಯುವ ನೀಲಕಂಠ: ಮುರುಗೇಶ ನಿರಾಣಿ

09:08 AM Apr 30, 2023 | Team Udayavani |

ಬಾಗಲಕೋಟೆ: ವಿಶ್ವ ನಾಯಕ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್‌, ತನ್ನ ಕೀಳು ಸಂಸ್ಕೃತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಅಂದು ಪರಶಿವ ಲೋಕದ ಹಿತ ಕಾಯಲು ವಿಷ ಕುಡಿದು ವಿಷಕಂಠನಾದರೆ, ಇಂದು ನರೇಂದ್ರ ಮೋದಿಜಿ ಈ ದೇಶವನ್ನು ಭಯೋತ್ಪಾದನೆಯ ಅಪತ್ತಿನಿಂದ ಪಾರು ಮಾಡಿದ ನೀಲಕಂಠ ಎಂದು ಕೈಗಾರಿಕೆ ಸಚಿವರೂ ಆಗಿರುವ ಬೀಳಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಹೇಳಿದರು.

Advertisement

ಬೀಳಗಿ ಕ್ಷೇತ್ರದ ಹಲಕುರ್ಕಿ, ಹಣಮನೇರಿ,ಚಿಚಂಚಲಕಟ್ಟಿ ಗ್ರಾಮಗಳಲ್ಲಿ ನಡೆದ ರೊಡ್‌ ಶೋ ನಂತರ ಪ್ರಚಾರ ಸಭೆಯಲ್ಲಿ ನರೇಂದ್ರ ಮೋದಿ ವಿಷಸರ್ಪ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಖಂಡಿಸಿ ಅವರು ಮಾತನಾಡಿದರು.

ಖರ್ಗೆ ಹಿರಿಯ ರಾಜಕಾರಣಿ, ಅವರ ವಯಸ್ಸಿಗೆ ಹಿರಿತನಕ್ಕೆ ತಕ್ಕದಾಗಿ ಮಾತನಾಡಬೇಕು. ನರೇಂದ್ರ ಮೋದಿ
ಬಗ್ಗೆ ಮಾತನಾಡಿದರೆ ಕೇವಲ ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲ, ಇಡೀ ದೇಶವೇ ಸಹಿಸಲ್ಲ. 10 ವರ್ಷಗಳ ಹಿಂದೆ ದೇಶದಲ್ಲಿ ಕಾಂಗ್ರೆಸ್‌ ಮಾಡಿದ ದುರಾಡಳಿತದಿಂದ ಎಂತಹ ಪರಿಸ್ಥಿತಿ ಇತ್ತು. ಗಡಿಯಲ್ಲಿ ಸೈನಿಕರು, ದೇಶದಲ್ಲಿ
ನಾಗರಿಕರು ಇಬ್ಬರೂ ಸುರಕ್ಷಿತರಾಗಿರಲಿಲ್ಲ. ಭಯೋತ್ಪಾದಕರ ಅಟ್ಟಹಾಸ ಮಿತಿ ಮೀರಿತ್ತು. ಆಗ ನರೇಂದ್ರ ಮೋದಿ ಆಗಮನ ಭಾರತಕ್ಕೆ ಹೊಸ ಭರವಸೆ ಮೂಡಿಸಿತು. ದೇಶದ ವಿಷಜಂತುಗಳಾಗಿದ್ದ ಭಯೋತ್ಪಾದಕರು,
ಮೂಲಭೂತವಾದಿಗಳನ್ನು ಮೆಟ್ಟಿ ನಿಂತು ಸುಭದ್ರ ರಾಷ್ಟ್ರ ಕಟ್ಟಿದ ಮೋದಿಜಿ ಭಾರತದ ಅಸ್ಮಿತೆಯ ಸಂಕೇತ ಎಂದರು.

ಬಾದಾಮಿ ತಾಲೂಕಿನ ಹಳ್ಳಿಗಳಿಗೆ ನೀರು ಒದಗಿಸಲು ನೀಡಲು 2008-13ರ ಅವಧಿಯಲ್ಲಿ ಹೆರಕಲ್‌ ಬ್ಯಾರೇಜ್‌ ನಿರ್ಮಿಸಲಾಗಿದೆ. ಇಂದು ಅದೇ ಬ್ಯಾರೇಜ್‌ ಮೂಲಕ 9 ಏತ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಮುಂದಿನ 18 ತಿಂಗಳಲ್ಲಿ ಬೀಳಗಿ ಮತಕ್ಷೇತ್ರ ವ್ಯಾಪ್ತಿಯ ಬಾದಾಮಿ ತಾಲೂಕಿನ ಎಲ್ಲ ಗ್ರಾಮಗಳು ಸಂಪೂರ್ಣ ನೀರಾವರಿಗೆ ಒಳಪಡುವ ಮೂಲಕ ರೈತರ ಭೂಮಿ ಹಸಿರಾಗಲಿದೆ ಎಂದು ಹೇಳಿದರು.

ಮುಖಂಡರಾದ ಹೂವಪ್ಪ ರಾಠೊಡ, ಪ್ರಕಾಶ ನಾಯ್ಕರ, ಸಂಗಯ್ಯ ಸರಗಣಾಚಾರಿ, ವೆಂಕನಗೌಡ ಗೌಡರ, ಹಣಮಂತಗೌಡ ಗೌಡರ್‌, ಮಾಗುಂಡೆಪ್ಪ ಕಟಗೇರಿ, ಡಾ|ರವಿ ಅಡಗಲ್‌, ಪರಪ್ಪ ಹೂಲಗೇರಿ, ಅಯ್ಯಪ್ಪ
ತಾಳಿ, ಪರಪ್ಪ ಬಂಡಿ, ಪಾರಪ್ಪ ಹೂಲಗೇರಿ, ಶಾಂತಪ್ಪ ಹೂಲಗೇರಿ, ಕೆಲೂಡೆಪ್ಪ ಹೂಲಗೇರಿ ಮುಂತಾದವರು ಪಾಲ್ಗೊಂಡಿದ್ದರು.

Advertisement

ಬಿಜೆಪಿ ಅಧಿಕಾರದಿಂದ ಭಾರತ ಸುಭದ್ರ: ದೇಶದ ಭದ್ರತೆ, ಸಮೃದ್ಧತೆ ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ. 65 ವರ್ಷ ಆಳಿದ ಕಾಂಗ್ರೆಸ್‌ ಭಾರತದಲ್ಲಿ ಸಮಸ್ಯೆಗಳನ್ನು ಜಿವಂತವಾಗಿಟ್ಟು ರಾಜಕಾರಣ ಮಾಡಿದೆ.
ಬಿಜೆಪಿ ಸಮಸ್ಯೆಗಳಿಗೆ ಪರಿಹಾರ ನೀಡಿ ಜನರ ಪರವಾಗಿ ನಿಂತಿದೆ ಎಂದು ವಿಧಾನಪರಿಷತ್‌
ಸದಸ್ಯ ಪಿ. ಎಚ್‌. ಪೂಜಾರ ಹೇಳಿದರು.

ತುಳಸಿಗೇರಿ, ಕಲಾದಗಿ, ಗೋವಿನಕೊಪ್ಪ ಗ್ರಾಮಗಳಲ್ಲಿ ಬೀಳಗಿ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿಯವರ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು.

ದೇಶ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ಇರುವುದರಿಂದ ಅಭಿವೃದ್ಧಿಗೆ ವೇಗ ದೊರೆಯುತ್ತದೆ. ಮುರುಗೇಶ ನಿರಾಣಿ
ಕಳೆದ ಮೂರು ಅವಧಿಯಲ್ಲಿ ಮಾಡಿದ ಕಾರ್ಯಗಳು ಬೀಳಗಿ ಮತಕ್ಷೇತ್ರವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತಿವೆ.

ಜನರ ನಾಡಿಮಿಡಿತ ಅರಿತು ಕೆಲಸ ಮಾಡುವ ಶಕ್ತಿ ಮುರುಗೇಶ ನಿರಾಣಿಯವರಿಗಿದೆ. ರಾಜ್ಯದಲ್ಲಿ ಡಬಲ್‌ ಇಂಜಿನ್‌ ಸರ್ಕಾರ ಮತ್ತೊಮ್ಮೆ ಸ್ಥಾಪನೆಯಾಗಬೇಕು. ಬೀಳಗಿಯಲ್ಲಿ ಅಭಿವೃದ್ಧಿ ಕೆಲಸಗಳು ಮುಂದುವರೆದು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಬೇಕಾದರೆ ಅದು ಮುರುಗೇಶ ನಿರಾಣಿಯವರಿಂದ ಮಾತ್ರ ಸಾಧ್ಯ. ಹೀಗಾಗಿ ಅವರಿಗೆ ಮತ್ತೊಮ್ಮೆ ಆಶೀರ್ವದಿಸಿ ಎಂದು ಹೇಳಿದರು.

ತುಳಸಿಗೇರಿ, ಕಲಾದಗಿ, ಗೋವಿನಕೊಪ್ಪ ಗ್ರಾಮದ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.ಖರ್ಗೆ ಹಿರಿಯ ರಾಜಕಾರಣಿ,ವಯಸ್ಸಿಗೆ ತಕ್ಕಂತೆ ಮಾತನಾಡಬೇಕು. ನರೇಂದ್ರ ಮೋದಿ ಬಗ್ಗೆ ಮಾತನಾಡಿದರೆ ಕೇವಲ ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲ, ಇಡೀ ದೇಶವೇ ಸಹಿಸಲ್ಲ. ಕಾಂಗ್ರೆಸ್‌ ಸರ್ಕಾರದ ದುರಾಡಳಿತದಿಂದ ದೇಶದಲ್ಲಿ ಎಂತಹ ಪರಿಸ್ಥಿತಿ ಇತ್ತು. ಗಡಿಯಲ್ಲಿ ಸೈನಿಕರು, ದೇಶದಲ್ಲಿ ನಾಗರಿಕರು ಸುರಕ್ಷಿತರಾಗಿರಲಿಲ್ಲ. ಭಯೋತ್ಪಾದಕರ ಅಟ್ಟಹಾಸ ಮಿತಿ ಮೀರಿತ್ತು. ಆಗ ನರೇಂದ್ರ ಮೋದಿ ಆಗಮನ ಭಾರತಕ್ಕೆ ಹೊಸ ಭರವಸೆ ಮೂಡಿಸಿತು. ದೇಶದ ವಿಷಜಂತುಗಳಾಗಿದ್ದ ಭಯೋತ್ಪಾದಕರು, ಮೂಲಭೂತವಾದಿಗಳನ್ನು ಮೆಟ್ಟಿ ನಿಂತು ಸುಭದ್ರ ರಾಷ್ಟ್ರ ಕಟ್ಟಿದ ಹೆಮ್ಮೆ ಮೋದಿ ಅವರಿಗಿದೆ.
-ಮುರುಗೇಶ ನಿರಾಣಿ
ಬೀಳಗಿ ಬಿಜೆಪಿ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next