Advertisement

ಮಕ್ಕಳಿಗೆ ಮೊಬೈಲೇ ಕೊಡದ ಬಿಲ್‌ಗೇಟ್ಸ್‌!

12:30 AM Feb 19, 2019 | Team Udayavani |

“ಅಯ್ಯೋ, ನಮ್‌ ಮಗ ಮೂರು ಹೊತ್ತು ಮೊಬೈಲ್‌ನಲ್ಲಿ ಆಡ್ತಾ ಇರ್ತಾನೆ. ಕೇಳಿದ್ರೆ, ನೋಟ್ಸು- ಅಸೈನ್‌ಮೆಂಟ್‌ ಅಂತ ನೆಪ ಹೇಳ್ತಾನೆ…’ ಅಂತ ಎಷ್ಟೋ ಹೆತ್ತವರು ಹೇಳ್ಳೋದನ್ನು ಕೇಳಿದ್ದೇವೆ. ಮಕ್ಕಳ ಈ ಮೊಬೈಲ್‌ ಗೀಳು ಸಾಮಾನ್ಯ ಪೋಷಕರನ್ನಷ್ಟೇ ಅಲ್ಲ, ತಂತ್ರಜ್ಞಾನದ ದಿಗ್ಗಜ ಬಿಲ್‌ಗೇಟ್ಸ್‌ಗೂ ತಲೆ ನೋವಾಗಿ ಕಾಡಿತ್ತು. ತಂತ್ರಜ್ಞಾನವನ್ನು ನಮ್ಮೆಲ್ಲರ ಬೆರಳ ತುದಿಗೆ ಅಂಟಿಸಿದ ಬಿಲ್‌ಗೇಟ್ಸ್‌, ತನ್ನ ಮಕ್ಕಳ ಮೊಬೈಲ್‌ ಬಳಕೆಯ ಮೇಲೆ ಮಾತ್ರ ಹದ್ದಿನಗಣ್ಣಿಟ್ಟದ್ದರು. ವಿಡಿಯೋ ಗೇಮ್ಸ್‌ಗೆ ಅತಿಯಾಗಿ ಅಡಿಕ್ಟ್ ಆಗಿದ್ದ ಮಗಳನ್ನು ನೋಡಿದ ಗೇಟ್ಸ್‌, ತಂತ್ರಜ್ಞಾನ ಬಳಕೆಯ ಮೇಲೆ ನಿಗಾ ಇಡಲು ನಿರ್ಧರಿಸಿದರು. ಮೂವರು ಮಕ್ಕಳಿಗೂ 14 ವರ್ಷ ಆಗುವವರೆಗೆ ಸ್ವಂತ ಸ್ಮಾರ್ಟ್‌ಫೋನ್‌ ಕೊಡಿಸಲಿಲ್ಲ. ನೋಟ್ಸ್‌, ಅಸೈನ್‌ಮೆಂಟ್‌ ಮುಂತಾದವಕ್ಕೆ ಬಳಸಬಹುದಿತ್ತಾದರೂ, ಜಾಸ್ತಿ ಹೊತ್ತು ಕಂಪ್ಯೂಟರ್‌ ಮುಂದೆ ಕೂರುವಂತಿರಲಿಲ್ಲ. ಊಟ ಮಾಡುವಾಗ, ರಾತ್ರಿ ಮಲಗುವಾಗ ಮೊಬೈಲ್‌ ಬಳಸುವಂತೆಯೇ ಇಲ್ಲ. “ಕ್ಲಾಸ್‌ನಲ್ಲಿ ಎಲ್ಲರ ಬಳಿಯೂ ಸ್ಮಾರ್ಟ್‌ಫೋನ್‌ ಇದೆ. ನಮಗ್ಯಾಕೆ ಕೊಡಿಸಲಿಲ್ಲ’ ಅಂತ ಮಕ್ಕಳು ಗೋಗರೆದರೂ, ಗೇಟ್ಸ್‌ ತನ್ನ ಕಠಿಣ ನಿಲುವು ಬದಲಿಸಲಿಲ್ಲ. 

Advertisement

“ನಮ್ಮ ಮಕ್ಕಳು ಎಷ್ಟು ತಂತ್ರಜ್ಞಾನ ಬಳಸಬೇಕು ಎಂಬುದರ ಬಗ್ಗೆ ನಾವು ತುಂಬಾ ಸೀರಿಯಸ್‌ ಆಗಿದ್ದೇವೆ. ಬೇಕಾಬಿಟ್ಟಿ ಬಳಸಲು ಬಿಡುವುದಿಲ್ಲ’ ಎಂದು, ನ್ಯೂಯಾರ್ಕ್‌ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಆ್ಯಪಲ್‌ ಕಂಪನಿಯ ಸ್ಥಾಪಕ ಸ್ಟೀವ್‌ ಜಾಬ್ಸ್ ಕೂಡ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next