Advertisement

ಬಿಕಿನಿ ಧರಿಸಿ ಸದ್ದು ಮಾಡಿದ ಸುಂದರಿ ಶರಪೋವಾ!

11:31 AM Jul 11, 2017 | |

ಲಂಡನ್‌: ಉದ್ದೀಪನ ವಿವಾದಕ್ಕೊಳಗಾಗಿದ್ದ ರಷ್ಯಾದ ಖ್ಯಾತ ಟೆನಿಸ್‌ ಆಟಗಾರ್ತಿ ಮರಿಯಾ ಶರಪೋವಾ ಈಗ “ಬಿಕಿನಿ’ ಧರಿಸಿ ನೀರಿಗೆ ಧುಮುಕಿರುವ ಸುದ್ದಿಯಲ್ಲಿದ್ದಾರೆ.ವಿಂಬಲ್ಡನ್‌ನಲ್ಲಿ ವೈಲ್ಡ್‌ ಕಾರ್ಡ್‌ ಪ್ರವೇಶಕ್ಕೆ ಮನಸ್ಸು ಮಾಡದ ಶರಪೋವಾ ವಿಶ್ರಾಂತಿಯಲ್ಲಿದ್ದಾರೆ.

Advertisement

ಬಿಕಿನಿ ಧರಿಸಿ ಸಮುದ್ರದ ನೀರಿಗೆ ಧುಮುಕುತ್ತಿರುವ ವೀಡಿಯೋ ಈಗ ವೈರಲ್‌ ಆಗಿದೆ. ಸ್ವತಃ ಇದನ್ನು ಶರಪೋವಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ ಎನ್ನುವುದು ಮತ್ತೂಂದು ವಿಶೇಷ. 5 ಬಾರಿಯ ಗ್ರ್ಯಾನ್‌ಸ್ಲಾಮ್‌ ವಿಜೇತ ಟೆನಿಸ್‌ ಆಟಗಾರ್ತಿ 2015ರಲ್ಲಿ ಮೆಲ್ಡೋನಿಯಂ ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು.

ಅಂತಾರಾಷ್ಟ್ರೀಯ ಕ್ರೀಡಾ ನ್ಯಾಯಾಲಯ ಇವರನ್ನು 2 ವರ್ಷ ನಿಷೇಧ ಮಾಡಿತ್ತು. ಬಳಿಕ ನಿಷೇಧ ಮರು ಪರಿಶೀಲನೆ ನಡೆಸಿ 15 ತಿಂಗಳಿಗೆ ಶಿಕ್ಷೆ ಕಡಿತಗೊಳಿಸಲಾಗಿತ್ತು.ಇತ್ತೀಚೆಗೆ ನಿಷೇಧ ಶಿಕ್ಷೆ ಮುಗಿಸಿ ಮತ್ತೆ  ಟೆನಿಸ್‌ಗೆ ಬಂದಿದ್ದರು. ಶರಪೋವಾ ಪುನರಾಗಮನದ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು. ಈ ನಡುವೆ ವಿಂಬಲ್ಡನ್‌ ಕೂಟದಿಂದ ಹಿಂದಕ್ಕೆ ಸರಿಯುತ್ತಿರುವುದಾಗಿ ಶರಪೋವಾ ಪ್ರಕಟಿಸಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next