Advertisement

Davanagere; ಜಾಲಿ ರೈಡ್ ಗೆ ಹೊರಟಿದ್ದ ಯುವಕರಿಗೆ ಅಪಘಾತ; ಸ್ಥಳದಲ್ಲೇ ಇಬ್ಬರ ದುರ್ಮರಣ

12:53 PM Sep 07, 2023 | Team Udayavani |

ದಾವಣಗೆರೆ: ಜಾಲಿ ರೈಡ್ ಹೊರಟಿದ್ದ ಕೇರಳ ಮೂಲದ ಇಬ್ಬರು ಯುವಕರು ದಾವಣಗೆರೆಯ ಹೊರ ವಲಯದಲ್ಲಿ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುವಾರ ಸಂಭವಿಸಿದೆ.

Advertisement

ಕೇರಳದ ಅತುಲ್ ಮತ್ತು ಋಷಿಕೇಶ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

ದಾವಣಗೆರೆ ರಾಷ್ಟ್ರೀಯ ಹೆದ್ದಾರಿ 54 ಎಸ್.ಎಸ್.ಆಸ್ಪತ್ರೆ ಬಳಿ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದ ನಂತರ ರಸ್ತೆ ಮೇಲಿನಿಂದ ರೈಲ್ವೆ ಸೇತುವೆ ಮೇಲೆ ಬಿದ್ದಿದ್ದಾರೆ.

ಇದನ್ನೂ ಓದಿ:Minister N. Chaluvaraya Swamy : ಬೆಂಗಳೂರು-ಜಲಸೂರು ರಸ್ತೆ ಕಾಮಗಾರಿ ಶೀಘ್ರ ಮುಗಿಸಿ

ಅಪಘಾತದ ರಭಸಕ್ಕೆ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರಿಬ್ಬರು ಎನ್ ಫಿಲ್ಡ್ ಬೈಕ್ ನಲ್ಲಿ‌ ಹುಬ್ಬಳಿಯಿಂದ ಬೆಂಗಳೂರು ಕಡೆ ಹೊರಟಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next