ನೋಯ್ಡಾ: ಇಲ್ಲಿನ ರಸ್ತೆಯಲ್ಲಿ ಮೋಟರ್ ಸೈಕಲ್ ಮೂಲಕ ಅತ್ಯಂತ ಅಪಾಯಕಾರಿ ಸಾಹಸವನ್ನು ಮಾಡಿದ ಹಿನ್ನೆಲೆಯಲ್ಲಿ ನೋಯ್ಡಾದ ಪೊಲೀಸರು ದೆಹಲಿ ಮೂಲಕ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ನಡೆದಿದೆ.
ಈ ವ್ಯಕ್ತಿಯನ್ನು ಪುಷ್ಪೇಂದ್ರ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ತನ್ನ ಮೊಟರ್ ಸೈಕಲ್ ನ ಮೂಲಕ ಜನನಿಬಿಡ ಪ್ರದೇಶದಲ್ಲಿ ಅತ್ಯಂತ ಅಪಾಯಕಾರಿ ಸಾಹಸವನ್ನು ಮಾಡಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ:ಮೂಲ ಸೌಕರ್ಯಗಳೊಂದಿಗೆ ಹಣಕಾಸು ಸಂಸ್ಥೆಗಳ ಅಭಿವೃದ್ಧಿ : ನಿರ್ಮಲಾ ಸೀತಾರಾಮನ್
ಘಟನೆಯ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು, ಈತ ತನ್ನ ಮೋಟರ್ ಸೈಕಲ್ ನ ಮೂಲಕ ನೋಯ್ಡಾ ದ ಸಾರ್ವಜನಿಕ ರಸ್ತೆಯಲ್ಲಿ ಅತ್ಯಂತ ಅಪಾಯಕಾರಿಯಾದ ಸಾಹಸವನ್ನು ಮಾಡುತ್ತಿದ್ದ. ಈತನ ಈ ಹುಚ್ಚು ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ತಮ್ಮ ಅರಿವಿಗೆ ಬಂದ ತಕ್ಷಣವೇ ಆತನನ್ನು ಇಲ್ಲಿನ ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಸದ್ಯ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯು ರಸ್ತೆ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಮನಬಂದಂತೆ ಬೈಕ್ ಸವಾರಿ ಮಾಡುತ್ತಿರುವುದು ಕಂಡುಬರುತ್ತಿದ್ದು, ಈ ವಿಡಿಯೋ ನೋಡಿದ ಬಳಿಕ ಹಲವು ಜನರು ಆತನ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:“ಹೆದರಿಸಿ’ ಕಡಿಮೆ ಬೆಲೆಗೆ ತಂಬಾಕು ಮಾರಿಸಿದ್ರು