Advertisement

ಕಳ್ಳರ ಬಂಧನ: 10 ಬೈಕ್‌ ಜಪ್ತಿ 

09:48 PM Jul 11, 2021 | Team Udayavani |

ಹಿರೇಬಾಗೇವಾಡಿ: ಬೆಳಗಾವಿ ಕ್ಯಾಂಪ್‌ ಪೊಲೀಸ್‌ ಠಾಣೆಯ ಪೊಲೀಸರು ನಡೆಸಿದ ಭರ್ಜರಿ ಕಾರ್ಯಚರಣೆಯಲ್ಲಿ ಇಬ್ಬರು ಬೈಕ್‌ ಕಳ್ಳರನ್ನು ಬಂಧಿ  ಸಿದ್ದು, ಅವರಿಂದ 10 ಬೈಕ್‌ ಗಳನ್ನು ಜಪ್ತಿ ಮಾಡಿದ್ದಾರೆ.

Advertisement

ಉದ್ಯಮಬಾಗ್‌ ರಾಜಾರಾಮ್‌ ನಗರದ ಪ್ರಸಾದ ಅಶೋಕ ಪಾಟೀಲ್‌ (24), ಯಳ್ಳೂರ ಗ್ರಾಮದ ಅಕ್ಷಯ ಅಶೋಕ ತಂಡಾಲೆ (22) ಬಂಧಿತರು. ಬಂಧಿ ತರಿಂದ ಬೆಳಗಾವಿ ನಗರವೂ ಸೇರಿ ವಿವಿಧ ಕಡೆಗಳಲ್ಲಿ ಕಳ್ಳತನ ಮಾಡಿದ್ದ ಇಬ್ಬರ ಕಳ್ಳರನ್ನು ಬಂಧಿಸುವಲ್ಲಿ ಸಫಲರಾಗಿದ್ದರೆ.

ಅಂದಾಜು 4 ಲಕ್ಷ 50 ಸಾವಿರ ರೂಪಾಯಿ ಮೌಲ್ಯದ 10 ಬೈಕ್‌ ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಪೊಲೀಸ್‌ ಆಯುಕ್ತ ಡಾ. ಕೆ.ತ್ಯಾಗರಾಜನ್‌, ಡಿಸಿಪಿಗಳಾದ ಡಾ.ವಿಕ್ರಮ್‌ ಅಮೆಟೆ, ಸಿಆರ್‌ .ನೀಲಗಾರ್‌ ಹಾಗೂ ಖಡೇಬಜಾರ್‌ ಎಸಿಪಿ ಚಂದ್ರಪ್ಪ ಮಾರ್ಗದರ್ಶನದಲ್ಲಿ ಕ್ಯಾಂಪ್‌ ಠಾಣೆ ಸಿಪಿಐ ಪ್ರಭಾಕರ್‌ ಧರ್ಮಟ್ಟಿ ಅವರ ನೇತೃತ್ವದ ತಂಡ ಇಬ್ಬರು ಬೈಕ್‌ ಕಳ್ಳರನ್ನು ಬಂ ಧಿಸಿದ್ದಾರೆ. ಈ ಕುರಿತು ಬೆಳಗಾವಿ ನಗರದ ಕ್ಯಾಂಪ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next