Advertisement

ಬೈಕ್‌ ಕಳವು: ಮತ್ತೂಬ್ಬ ಆರೋಪಿ ಬಂಧನ, 19 ವಾಹನ ವಶ

12:31 PM Aug 31, 2020 | Suhan S |

ರಾಮನಗರ: ಜಿಲ್ಲೆಯ ಚನ್ನಪಟ್ಟಣದಲ್ಲಿ ಬೈಕ್‌ ಕಳ್ಳತನದ ಹಾವಳಿ ಹೆಚ್ಚಾಗುತ್ತಿದ್ದು, ಪೊಲೀಸ್‌ ಅಧೀಕ್ಷರು ರಚಿಸಿದ್ದ ವಿಶೇಷ ತಂಡ ಮತ್ತೂಬ್ಬ ಆರೋಪಿಯನ್ನು ಪತ್ತೆ ಹಚ್ಚಿದೆ.

Advertisement

ಆಗಸ್ಟ್‌ 20ರಂದು ಚನ್ನಪಟ್ಟಣ ತಾಲೂಕು ವಿರೂಪಾಕ್ಷಿಪುರ ಹೋಬಳಿ ಮೆಣಸಿಗನಹಳ್ಳಿಯ ಶಿವಮಲ್ಲಯ್ಯ ಎಂಬುವರು ಮಾವಿನ ತೋಟದಲ್ಲಿ ನಿಲ್ಲಿಸಿ ಕೂಲಿ ಕೆಲಸಕ್ಕೆ ತೆರಳಿ ದ್ದಾಗ ತಮ್ಮ ಬೈಕ್‌ ಕಳ್ಳತನವಾಗಿದೆ ಎಂದು ದೂರು ನೀಡಿದ್ದರು. ಚನ್ನಪಟ್ಟಣ ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಬೈಕ್‌ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿ ದ್ದುದ್ದನ್ನು ಗಮನಿಸಿದ ಎಸ್ಪಿ, ಚನ್ನಪಟ್ಟಣ ಗ್ರಾಮಾಂತರ ವೃತ್ತ ಸಿಪಿಐ ವಸಂತ್‌ ನೇತೃತ್ವದ ವಿಶೇಷ ತಂಡ ರಚಿಸಿದ್ದರು. ಕಾರ್ಯಪ್ರವೃತ್ತರಾದ ಈ ತಂಡ ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನ ಬ್ಯಾಡರಹಳ್ಳಿಯ ನಿವಾಸಿ ಭವನ ಬಿನ್‌ ಕೆಂಪೇಗೌಡ ಎಂಬ 19 ವರ್ಷದ ಯುವಕನನ್ನು ಬಂಧಿಸಿದ್ದು, ಈತನಿಂದ 8.45 ಲಕ್ಷ ರೂ. ಮೌಲ್ಯದ 19 ದ್ವಿಚಕ್ರವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ದ್ವಿಚಕ್ರ ವಾಹನಗಳ ಪೈಕಿ ಅಕ್ಕೂರು ಪೊಲೀಸ್‌ ಠಾಣೆ ವ್ಯಾಪ್ತಿಯ 5 ಪ್ರಕರಣ, ಕನಕಪುರ ತಾಲೂಕು ಸಾತ ನೂರು ಠಾಣೆಯ 2 ಪ್ರಕರಣ, ಕನಕಪುರ ಗ್ರಾಮಾಂತರ ಠಾಣೆಯ 1 ಪ್ರಕರಣ, ಮಂಡ್ಯ ಜಿಲ್ಲೆ ಮಳವಳ್ಳಿ ಗ್ರಾಮಾಂತರ ಠಾಣೆಯ 3, ಮಂಡ್ಯ ಜಿಲ್ಲೆ ಕಿರುಗಾವಲು ಠಾಣೆಯ 2, ಕೆ.ಎಂ.ದೊಡ್ಡಿ ಠಾಣೆಯ 1, ಬನ್ನೂರು ಠಾಣೆ ವ್ಯಾಪ್ತಿಯ 1 ಮತ್ತುಮದ್ದೂರು ಠಾಣೆಯ 4 ಪ್ರಕರಣಗಳ ಸಂಬಂಧ ಒಟ್ಟು 19 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ಪತ್ತೆ ಹಚ್ಚಿ ಲಕ್ಷಾಂತರ ರೂ. ಮೌಲ್ಯದ ಕಳವು ಮಾಲನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದ ಸಿಪಿಐ ವಸಂತ್‌, ಅಕ್ಕೂರು ಪಿಎಸ್‌ಐ ಸಿ.ಆರ್‌.ಭಾಸ್ಕರ್‌, ಎಎಸ್‌ಐಗಳಾದ ಪರಮಶಿವಯ್ಯ, ಎಂ.ರಾಜು, ಸಿಬ್ಬಂದಿಗಳಾದ ನಾಗರಾಜು, ಶಿವರಾಜಕುಮಾರ ಕುಂಭವ್ವರ, ಶಿವಕುಮಾರ, ಸುನೀಲ್‌, ಎಚ್‌.ಪ್ರಕಾಶ್‌, ಹೊಂಬಾಳ ಶೇಖಣ್ಣನವರ್‌ ಅವರುಗಳನ್ನು ಎಸ್ಪಿಯವರು ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next