Advertisement

ಗ್ರಾಹಕನ ಸೋಗಿನಲ್ಲಿ ಬಂದು ಟೆಸ್ಟ್‌ ಡ್ರೈವ್‌ ಹೋಗುವ ನೆಪದಲ್ಲಿ ಬೈಕ್‌ ಕಳ್ಳತನ

06:19 PM Nov 02, 2020 | sudhir |

ಉಡುಪಿ: ಬೈಕ್‌ ಖರೀದಿಸುವ ಸೋಗಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಟೆಸ್ಟ್‌ ಡ್ರೈವ್‌ಗೆ ಹೋಗಿ ಬರುತ್ತೇನೆಂದು ಬೈಕ್‌ವೊಂದನ್ನು ಕದ್ದುಕೊಂಡು ಪರಾರಿಯಾದ ಘಟನೆ ಮಣಿಪಾಲ ಲಕ್ಷ್ಮೀಂದ್ರನಗರದ ನ್ಯೂ ಮಣಿಪಾಲ್‌ ಬಜಾರಿನಲ್ಲಿ ನಡೆದಿದೆ.

Advertisement

ಗಣೇಶ್ ಉದ್ಯಾವರ ಎಂದು ಹೆಸರು ಹೇಳಿಕೊಂಡು ಬಂದ ಅಪರಿಚಿತ ವ್ಯಕ್ತಿಯೊಬ್ಬ ಬೈಕ್‌ ಖರೀದಿಸುವಂತೆ ನಟಿಸಿದ್ದಾನೆ. ಬಜಾರ್‌ ಒಳಗೆ ಬಂದು ಕೆಲವೊಂದು ಬೈಕ್‌ಗಳನ್ನು ನೋಡಿ ಅನಂತರ ಬಜಾರಿನ ಮುಂಭಾಗದಲ್ಲಿ ಮಾರಾಟ ಮಾಡಲು ಇಟ್ಟಿದ್ದ ಟಿವಿಎಸ್‌ ವಿಕ್ಟರ್‌ ಬೈಕ್‌ ನೋಡಿ “ನಾನು ಒಮ್ಮೆ ಟೆಸ್ಟ್‌ ಡ್ರೈವ್‌ಗೆ ಹೋಗಿ ಬರುತ್ತೇನೆ’ ಎಂದು ಹೋದವನು ವಾಪಾಸು ಬಾರದೆ ಪರಾರಿಯಾಗಿದ್ದಾನೆ.

ಈ ಕುರಿತು ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಸಿಗಂದೂರು ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಹೇಳಿದ್ದನ್ನು ಭಟ್ರು ಕೇಳಬೇಕು ಅದೇ ಧರ್ಮ : ಬೇಳೂರು

ಮನೆಯ ಬಳಿ ನಿಲ್ಲಿಸಿದ್ದ ಆಟೋರಿಕ್ಷಾ ಕಳವು

Advertisement

ಉಡುಪಿ: ಮನೆಯ ಬಳಿ ನಿಲ್ಲಿಸಿದ್ದ ಆಟೋ ರಿಕ್ಷಾವನ್ನು ಕಳವು ಮಾಡಿದ ಘಟನೆ ಮಣಿಪಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದ ಮೂಡು ಪೆರಂಪಳ್ಳಿಯಲ್ಲಿ ನಡೆದಿದೆ.

ಶಿವಳ್ಳಿ ಗ್ರಾಮದ ಮೂಡುಪೆರಂಪಳ್ಳಿ ನಿವಾಸಿ ಶಂಕರ ಪೂಜಾರಿ (52) ಅವರು ಆಟೋ ಕಳೆದುಕೊಂಡವರು. ಅವರು ಅ. 31ರಂದು ಮನೆಯ ಬಳಿ ಆಟೋವನ್ನು ನಿಲ್ಲಿಸಿದ್ದರು. ನ. 1ರ ಬೆಳಗ್ಗೆ ನೋಡುವಾಗ ಆಟೋ ನಾಪತ್ತೆಯಾಗಿತ್ತು. ಕಳವಾದ ಆಟೋದ ಮೌಲ್ಯ 2.50 ಲ.ರೂ. ಎಂದು ಅಂದಾಜಿಸಲಾಗಿದೆ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next