Advertisement

Bike theft: ಮದ್ಯ ಸೇವನೆಗಾಗಿ ಬೈಕ್‌ ಕಳವು ಮಾಡುತ್ತಿದ್ದ ಆರೋಪಿ ಬಂಧನ

11:21 AM Nov 05, 2023 | Team Udayavani |

ಬೆಂಗಳೂರು: ಮದ್ಯ ಸೇವನೆಗಾಗಿ ಮನೆ ಮುಂದೆ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಗಿರಿನಗರ ನಿವಾಸಿ ಲಕ್ಷ್ಮಣ್‌(27) ಬಂಧಿತ. ಆರೋಪಿಯಿಂದ 11.55 ಲಕ್ಷ ರೂ. ಮೌಲ್ಯದ 20 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಆರೋಪಿ ಅ.28ರಂದು ಮಹಿಳೆಯೊಬ್ಬರು ತಮ್ಮ ಸ್ಕೂಟರ್‌ ಅನ್ನು ವಿವೇಕಾನಂದ ಪಾರ್ಕ್‌ಗೇಟ್‌ ಮುಂಭಾಗದಲ್ಲಿ ನಿಲ್ಲಿಸಿ ಪಾರ್ಕ್‌ಗೆ ಹೋಗಿದ್ದರು. ವಾಪಸ್‌ ಬಂದು ನೋಡಿದ್ದಾಗ ಕಳವು ಮಾಡಲಾಗಿತ್ತು. ಆರೋಪಿಯು ಒಂದು ಏರಿಯಾದಲ್ಲಿ ದ್ವಿಚಕ್ರ ವಾಹನ ಕದ್ದು ಅದರ ಬ್ಯಾಟರಿ, ಟಯರ್‌ ಹಾಗೂ ವಸ್ತುಗಳನ್ನು ತೆಗೆದು ಮಾರಾಟ ಮಾಡಿ ಅದನ್ನು ಮತ್ತೂಂದು ಏರಿಯಾದಲ್ಲಿ ಬಿಟ್ಟು ಹೋಗುತ್ತಿದ್ದ. ಬಿಡಿಭಾಗಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ನಿತ್ಯ ಮದ್ಯ ಸೇವಿಸಿ ವ್ಯಯಿಸುತ್ತಿದ್ದ. ಈತನ ಬಂಧನದಿಂದ 15 ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು. ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next