Advertisement

ಬೈಕ್‌ -ಟೆಂಪೋ ಢಿಕ್ಕಿ: ಸವಾರ ಸಾವು

01:01 AM Apr 09, 2019 | Sriram |

ಬೈಂದೂರು: ಕೊಲ್ಲೂರು ರಸ್ತೆಯ ಆರೆಶಿರೂರು ತೊಂಡ್ಲೆ ಬಳಿ ಬೈಕ್‌ ಹಾಗೂ ಟೆಂಪೋ ಢಿಕ್ಕಿ ಹೊಡೆದು ಸವಾರ,ಶಿರೂರು ನಿವಾಸಿ ತಿಮ್ಮಪ್ಪ ಪೂಜಾರಿ (40) ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜತೆಗಿದ್ದ ಸಹೋದರಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕುಂದಾಪುರದ ಆಸ್ಪ ತ್ರೆಗೆ ದಾಖಲಿಸಲಾಗಿದೆ.

Advertisement

ಈ ತಿಂಗಳ 22ರಂದು ಅವರ ಸಹೋದರಿಯ ಮದುವೆ ನಡೆಯಲಿತ್ತು.ಗೋಳಿಹೊಳೆ ಕಡೆಗೆ ಆಮಂತ್ರಣ ಹಂಚಲು ತೆರಳಿದ್ದಾಗ ಅಪಘಾತದ ಸಂಭವಿಸಿದೆ. ಕೊಲ್ಲೂರು ರಸ್ತೆ ಯಲ್ಲಿ ಅತಿ ವೇಗದಿಂದ ಬಂದ ಟೆಂಪೋ ಸೇತುವೆಗೆ ಢಿಕ್ಕಿ ಹೊಡೆದು ಬಳಿಕ ದ್ವಿಚಕ್ರ ವಾಹನಕ್ಕೆ ಅಪ್ಪಳಿಸಿದೆ.ಪರಿಣಾಮ ತಿಮ್ಮಪ್ಪ ಪೂಜಾರಿಯ ಹೊಟ್ಟೆ ಹಾಗೂ ತಲೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು ಸಾವಿಗೀಡಾದರು.ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next