Advertisement

Bike Skid: ಕೆರಾಡಿ; ಬೈಕ್‌ ಸ್ಕಿಡ್‌; ಬಾಲಕನಿಗೆ ಗಾಯ

08:20 PM Mar 07, 2024 | Team Udayavani |

ಕೊಲ್ಲೂರು: ಕೆರಾಡಿ ಗ್ರಾಮದ ಚಪ್ಪರಕ ಹಾಡಿಬಿರ್ಗಿನಲ್ಲಿ ಬೈಕ್‌ ಸ್ಕಿಡ್‌ ಆದ ಪರಿಣಾಮ ಸಹಸವಾರನಾಗಿದ್ದ ಬಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿದೆ.

Advertisement

ಭಾಸ್ಕರ ಅವರು ತಮ್ಮ ಮೊಮ್ಮಗ ಸಾತ್ವಿಕ್‌ (16)ನನ್ನು ಬೈಕ್‌ನಲ್ಲಿ ಕುಳ್ಳಿರಿಸಿ ಕೆರಾಡಿ ಪೇಟೆಗೆ ಸಾಗುತ್ತಿದ್ದಾಗ ವಾಹನ ನಿಯಂತ್ರಣ ತಪ್ಪಿ ಸ್ಕಿಡ್‌ ಆಗಿತ್ತು. ಈ ವೇಳೆ ಸಾತ್ವಿಕ್‌ ಗಂಭೀರ ಗಾಯಗೊಂಡಿದ್ದಾನೆ. ಗಾಯಾಳುವನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next