Advertisement

ಹುಣಸೂರು ಪೋಲೀಸರ ಮಿಂಚಿನ ಕಾರ್ಯಾಚರಣೆ : ನೂರಕ್ಕೂ ಹೆಚ್ಚು ಬೈಕ್ ವಶ

12:27 PM May 29, 2021 | Team Udayavani |

ಹುಣಸೂರು: ನಗರದಲ್ಲಿ ಕಠಿಣ ಲಾಕ್ ಡೌನ್ ನಿಯಮ ಜಾರಿಯಲ್ಲಿದ್ದರೂ, ಕ್ಯಾರೇ ಎನ್ನದೇ ಓಡಾಡುತ್ತಾ ಇದ್ದ ನೂರಕ್ಕೂ ಹರಚ್ಚಿನ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

ತಹಸೀಲ್ದಾರ್ ಬಸವರಾಜ್ ಹಾಗೂ ಡಿವೈ ಎಸ್ ಪಿ ರವಿಪ್ರಸಾದ್ ನೇತೃತ್ವದಲ್ಲಿ ಪೋಲೀಸರು ಹಾಗೂ ಗೃಹರಕ್ಷಕ ಸಿಬ್ಬಂದಿಗಳು ನಗರದ ವಿವಿಧ ವೃತ್ತಗಳಲ್ಲಿ ವಾಹನಗಳನ್ನು ವಶಕ್ಕೆ ಪಡೆದರು.

ಈ ವೇಳೆ ಕೆಲ ನಗರಸಭೆ ಸದಸ್ಯರು ಹಾಗೂ ಗ್ರಾಮೀಣ ಭಾಗದಿಂದ ಬೈಕ್ ಗಳಲ್ಲಿ ಬಂದಿದ್ದ ಸಾರ್ವಜನಿಕರು ವೈದ್ಯರ ಹಳೇ ತಪಾಸಣೆ ಚೀಟಿ ತೋರಿಸಿ,ಪೋಲೀಸರಿಗೆ ಸಬೂಬು ಹೇಳಿದರಾದರೂ ಡಿವೈಎಸ್ ಪಿ ರವಿಪ್ರಸಾದ್ ಎಚ್ಚರಿಕೆ ನೀಡಿ ಬೈಕ್ ಗಳನ್ನು ವಶಕ್ಕೆ ಪಡೆದರು.

ಇದನ್ನೂ ಓದಿ :  ಕೋವಿಡ್ ನಿಂದ ಮರಣ ಹೊಂದಿದ ಆಶಾ, ಅಂಗನವಾಡಿ ಕಾರ್ಯಕರ್ತರ ಕುಟುಂಬಕ್ಕೆ ಕೂಡಲೇ ಪರಿಹಾರ ಕೊಡಿ

Advertisement

Udayavani is now on Telegram. Click here to join our channel and stay updated with the latest news.

Next