Advertisement

Road Mishap ಬೈಕ್‌-ಸ್ಕೂಟರ್‌ ಢಿಕ್ಕಿ; ಮೂವರಿಗೆ ಗಾಯ

09:53 PM May 21, 2024 | Team Udayavani |

ಮೂಲ್ಕಿ: ಹಳೆಯಂಗಡಿಯ ಪಾವಂಜೆಯ ಜಂಕ್ಷನ್‌ ಬಳಿ ಬೈಕ್‌ ಮತ್ತು ಸ್ಕೂಟರ್‌ನ ನಡುವೆ ಢಿಕ್ಕಿ ಸಂಭವಿಸಿದ್ದು ಮೂವರು ಗಾಯಗೊಂಡಿದ್ದಾರೆ.

Advertisement

ಸ್ಕೂಟರ್‌ ಸವಾರನ ಅವಾಂತರದಿಂದ ಹಿಂಬದಿಯಲ್ಲಿದ್ದ ಬೈಕ್‌ ಢಿಕ್ಕಿ ಹೊಡೆದು ಮೂವರು ರಸ್ತೆಗೆ ಬಿದ್ದು ಗಾಯಗೊಂಡರು. ಬೈಕ್‌ ಸವಾರ ಕೃಷ್ಣಾಪುರದ ಇಸ್ಮಾಯಿಲ್‌, ಸ್ಕೂಟರ್‌ ಸವಾರ ಬಂಟ್ವಾಳ ಬಳಿಯ ಮೆಲ್ವಿನ್‌ ವೇಗಸ್‌ ಹಾಗೂ ಹಿಂಬದಿಯಲ್ಲಿದ್ದ ಕ್ಯಾರೆಲ್‌ ಲೂಯಿಸ್‌ ಗಾಯಗೊಂಡವರು.

ಟ್ರಾಪಿಕ್‌ ಮಂಗಳೂರು ಉತ್ತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next