Advertisement
ಇಲ್ಲಿಗೆ ಆಗಮಿಸುವ ದೇಶ ವಿದೇಶಗಳ ಪ್ರವಾಸಿಗರು ಹಲವು ದಿನಗಳ ಕಾಲ ಇಲ್ಲಿ ರೆಸಾರ್ಟ್ ಹೊಟೇಲುಗಳಲ್ಲಿ ಉಳಿದುಕೊಂಡು ಸುತ್ತಲಿರುವ ಪಂಪಾಸರೋವರ, ಹನುಮನಹಳ್ಳಿ, ಋಷಿಮುಖ ಮುಖಪರ್ವತ, ಶಬರಿ ಗುಹೆ, ವಾಲೀಕಿಲ್ಲಾ ಆದಿಶಕ್ತಿ ಸಾಣಾಪೂರ ಕೆರೆ (ಲೇಖ್) ಸೇರಿ ಅಂಜನಾದ್ರಿ ಬೆಟ್ಟ ಪ್ರದೇಶದಲ್ಲಿ ಬೆಳ್ಳಿಗ್ಗೆ ಮತ್ತು ಸಂಜೆ ಸೂರ್ಯೋದಯ ಮತ್ತು ಸೂರ್ಯಾಸ್ತ ದೃಶ್ಯ ವೀಕ್ಷಣೆ ಮಾಡುತ್ತಾರೆ.
ಹಳದಿ ಬಣ್ಣ ನಾಮಫಲಕವಿದ್ದರೆ ಓಕೆ:
ರಾಜ್ಯದಲ್ಲಿ ಕೆಲ ಪ್ರವಾಸಿ ತಾಣಗಳಲ್ಲಿ ಈಗಾಗಲೇ ಹಳದಿ ಬಣ್ಣದ ನಾಮಫಲಕ ಹೊಂದಿದ ಬೈಕ್ ಗಳನ್ನು ಪ್ರವಾಸಿಗರಿಗೆ ಬಾಡಿಗೆ ನೀಡಲಾಗುತ್ತಿದ್ದು ಇದೇ ಮಾದರಿಯಲ್ಲಿ ಆನೆಗೊಂದಿ ವಿರೂಪಾಪೂರಗಡ್ಡಿ ಪ್ರದೇಶದಲ್ಲಿ ಬಾಡಿಗೆ ಬೈಕ್ ನೀಡುವವರು ಸಾರಿಗೆ ಇಲಾಖೆಯ ನಿಯಮದಂತೆ ಹಳದಿ ನಾಮಫಲಕ ನಿಯಮ ಪಾಲನೆ ಮಾಡಬೇಕಿದೆ.
ಶೀಘ್ರ ಸಭೆ:
ಪ್ರವಾಸಿತಾಣವಾಗಿರುವ ಆನೆಗೊಂದಿ ವಿರೂಪಾಪೂರಗಡ್ಡಿ ಸಾಣಾಪೂರ ಪ್ರದೇಶದಲ್ಲಿ ಸಾರಿಗೆ ಇಲಾಖೆ ವತಿಯಿಂದ ಬೈಕ್ ಬಾಡಿಗೆ ಕೊಡುವವರ ಸಭೆ ನಡೆಸಿ ಏಕಗವಾಕ್ಷ ಮೂಲಕ ಬೈಕ್ ಗಳಿಗೆ ಹಳದಿ ನಾಮಫಲಕ ನಿಯಮದಂತೆ ಪರವಾನಿಗೆ ನೀಡಲಾಗುತ್ತದೆ ಎಂದು ಜಿಲ್ಲಾ ಸಾರಿಗೆ ಪ್ರಾದೇಶಿಕ ಅಧಿಕಾರಿ ಎನ್.ಶೇಖರ್ ಉದಯವಾಣಿ ಜತೆ ಮಾತನಾಡಿ ತಿಳಿಸಿದ್ದಾರೆ.