Advertisement

ಜೆಡಿಎಸ್‌ನಿಂದ ಬೈಕ್‌ ರ್ಯಾಲಿ

12:46 PM Aug 23, 2017 | |

ಹುಬ್ಬಳ್ಳಿ: ಮಹದಾಯಿ, ಕಳಸಾ-ಬಂಡೂರಿ ಸಮಸ್ಯೆ, ರೈತರ ಸಂಪೂರ್ಣ ಸಾಲಮನ್ನಾ, ಫಸಲ್‌ ಬೀಮಾ ಯೋಜನೆಯ ಪರಿಹಾರ ರೈತರ ಬ್ಯಾಂಕ್‌ ಖಾತೆಗೆ ಬಿಡುಗಡೆ ಮಾಡಬೇಕು ಹಾಗೂ ಕೇಂದ್ರ ಸರಕಾರವು ಸ್ಥಗಿತಗೊಳಿಸಿರುವ ಹಲವು ಯೋಜನೆಗಳನ್ನು ಪುನಃ ಆರಂಭಿಸಬೇಕೆಂದು ಒತ್ತಾಯಿಸಿ ಜೆಡಿಎಸ್‌ ಕಾರ್ಯಕರ್ತರು ಬೃಹತ್‌ ಬೈಕ್‌ ರ್ಯಾಲಿಯನ್ನು ಆ.23ರಂದು ಬೆಳಿಗ್ಗೆ 9:30 ಗಂಟೆಗೆ ನವಲಗುಂದದ ಲಿಂಗರಾಜ ವೃತ್ತದಿಂದ ಹುಬ್ಬಳ್ಳಿ ವರೆಗೆ ಆಯೋಜಿಸಿದ್ದಾರೆ. 

Advertisement

ಶಾಸಕ ಎನ್‌.ಎಚ್‌. ಕೋನರಡ್ಡಿ ನೇತೃತ್ವ ಹಾಗೂ ಯುವ ಜನತಾದಳದ ಅಧ್ಯಕ್ಷ ಶ್ರೀಶೈಲ ಮೂಲಿಮನಿ ಮುಖಂಡತ್ವದಲ್ಲಿ ರ್ಯಾಲಿ ನಡೆಯಲಿದೆ. ರ್ಯಾಲಿ ಕುಮಾರಗೊಪ್ಪ, ಯಮನೂರ, ಅರೇಕುರಹಟ್ಟಿ, ಕರ್ಲವಾಡ, ಕಾಲವಾಡ, ಹೆಬಸೂರ, ಕಿರೇಸೂರ, ಕುಸುಗಲ್ಲ ಮಾರ್ಗವಾಗಿ ನಗರದ ಕೇಶ್ವಾಪುರ ಪ್ರವೇಶಿಸಲಿದೆ.

ನಂತರ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು. ಅನಂತರ ಗೋಕುಲ ರಸ್ತೆಯ ಚವ್ಹಾಣ ಗಾರ್ಡನ್‌ದಲ್ಲಿ ಮುಕ್ತಾಯಗೊಳ್ಳಲಿದೆ.

ರ್ಯಾಲಿಯಲ್ಲಿ ಹಾಗೂ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಶಾಸಕ ಎನ್‌.ಎಚ್‌. ಕೋನರಡ್ಡಿ ಸೇರಿದಂತೆ ಜೆಡಿಎಸ್‌ನ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ನವಲಗುಂದ ತಾಲೂಕ ಜೆಡಿಎಸ್‌ ಅಧ್ಯಕ್ಷ ವೀರಣ್ಣ ನೀರಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next