ದೆಹಲಿ: ಶಾಲೆಗೆ ಹೋಗುತ್ತಿದ್ದ ಬಾಲಕಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾದ ಘಟನೆ ರಾಷ್ಟ್ರ ರಾಜಧಾನಿ ದಿಲ್ಲಿಯ ದ್ವಾರಕಾ ಪ್ರದೇಶ ಬುಧವಾರ ಮುಂಜಾನೆ ( ಡಿ.14 ರಂದು) ನಡೆದಿದೆ.
ದೆಹಲಿ ಮೋಹನ್ ಗಾರ್ಡನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 17 ವರ್ಷದ ವಿದ್ಯಾರ್ಥಿನಿ ಹಾಗೂ ಆಕೆ ತಂಗಿ ಶಾಲೆಗೆ ಹೋಗುತ್ತಿದ್ದಾಗ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಆ್ಯಸಿಡ್ ಎಸೆದು ಪರಾರಿಯಾಗಿದ್ದಾರೆ. ನೋವಿನಿಂದ ನರಳಾಡಿದ ಬಾಲಕಿ ರಸ್ತೆಯಲ್ಲಿ ಅತ್ತಿತ್ತ ಓಡಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.
ಸಂತ್ರಸ್ತೆಯ ತಂಗಿ ಘಟನೆಯನ್ನು ಹತ್ತಿರ ನೋಡಿದ್ದು, ನಾನು ಹಾಗೂ ನನ್ನ ಅಕ್ಕಾ ಶಾಲೆಗೆ ಹೋಗುವ ವೇಳೆ ಬೈಕ್ ನಲ್ಲಿ ಬಂದು ಆ್ಯಸಿಡ್ ಎರಚಿದ್ದಾರೆ. ನಾನು ಅಕ್ಕನ ಮುಖ ನೋಡಿ ಗಾಬರಿಗೊಂಡು ನನ್ನ ತಂದೆಗೆ ಕರೆ ಮಾಡಿದೆ. ಬೈಕ್ ನಲ್ಲಿ ಯಾವುದೇ ನಂಬರ್ ಪ್ಲೇಟ್ ಇರಲಿಲ್ಲ. ಅವರಿಬ್ಬರೂ ನಮಗೆ ಮೊದಲೇ ಗೊತ್ತಿದೆ. ನನ್ನ ತಂದೆಗೂ ಬೈಕ್ ನಲ್ಲಿದ್ದ ಇಬ್ಬರ ಗುರುತು ಪರಿಚಯವಿದೆ ಎಂದಿದ್ದಾರೆ.
ಸಂತ್ರಸ್ತೆಯ ತಂಗಿ ಆರೋಪಿಗಳನ್ನು ಸಚಿನ್ ಹಾಗೂ ಹನಿಯೆಂದು ಗುರುತಿಸಿದ್ದಾಳೆ. ಅವರಿಬ್ಬರು ನಮ್ಮ ಶಾಲೆಯವರಲ್ಲ ಎಂದಿದ್ದಾಳೆ.ಈ ಸಂಬಂಧ ಈಗಾಗಲೇ ಓರ್ವನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಘಟನೆಯ ದೃಶ್ಯ ಸೆರೆಯಾಗಿದೆ.