Advertisement

ಪುತ್ತೂರು: ಮಗನನ್ನು ಬಸ್‌ಗೆ ಬಿಡಲು ತೆರಳುತ್ತಿರುವ ವೇಳೆ ಅಫಘಾತ; ತಂದೆ ಸಾವು

09:56 AM Jul 04, 2022 | Team Udayavani |

ಪುತ್ತೂರು: ಬೆಂಗಳೂರಿಗೆ ಹೊರಟ ಮಗನನ್ನು ಬಸ್‌ಗೆ ಬಿಡಲು ತೆರಳುತ್ತಿರುವ ವೇಳೆ ಬೈಕ್ – ಮಾರುತಿ ಓಮ್ನಿ ನಡುವೆ ಢಿಕ್ಕಿ ಸಂಭವಿಸಿ ಓರ್ವ ಸಾವನ್ನಪ್ಪಿರುವ ಘಟನೆ ಭಾನುವಾರ (ಜು.3 ) ತಡರಾತ್ರಿ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಕುಂಬ್ರದಲ್ಲಿ ನಡೆದಿದೆ.

Advertisement

ಕುಂಬ್ರ ಪಂಜಿಗುಡ್ಡೆ ನಿವಾಸಿ ರಘುನಾಥ ಶೆಟ್ಟಿ ಮೃತಪಟ್ಟ ದುರ್ದೈವಿ.

ಬೆಂಗಳೂರಿಗೆ ತೆರಳುತ್ತಿರುವ ಮಗನನ್ನು ರಘುರಾಮ ಶೆಟ್ಟಿ ಬಸ್ ಗೆ ಬಿಡಲು ಪುತ್ತೂರಿಗೆ ಮನೆಯಿಂದ ಬೈಕ್ ನಲ್ಲಿ ಬರುತ್ತಿದ್ದರು. ಈ ವೇಳೆ, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಶೀನಪ್ಪ ಅವರ  ಮಾರುತಿ ಓಮ್ನಿ ನಡುವೆ ಢಿಕ್ಕಿ ಸಂಭವಿಸಿದೆ.

ಇದನ್ನೂ ಓದಿ: ಕಿರೀಟ ಗೆದ್ದ ಕರುನಾಡ ಕುವರಿ: ಮಿಸ್ ಇಂಡಿಯಾ ಕಿರೀಟ ಗೆದ್ದ ಉಡುಪಿಯ ಸಿನಿ ಶೆಟ್ಟಿ

ಢಿಕ್ಕಿಯ ರಭಸಕ್ಕೆ ಬೈಕ್ ಸವಾರ ರಘುನಾಥ ಶೆಟ್ಟಿ ಮತ್ತು ಅವರ ಪುತ್ರ ಗಂಭೀರ ಗಾಯಗೊಂಡಿದ್ದು, ಕೂಡಲೇ ಅವರನ್ನು ಸ್ಥಳಿಯರಾದ ಚಿತ್ರ ನಟ ಸುಂದರ ರೈ ಮಂದಾರ ಹಾಗೂ ತಮ್ಮ ಸ್ನೇಹಿತರು ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದರೂ ದಾರಿ ಮಧ್ಯೆ ರಘುರಾಮ ಶೆಟ್ಟಿ ಅವರು ಮೃತಪಟ್ಟಿದ್ದಾರೆ. ರಘುರಾಮ ಶೆಟ್ಟಿ ಪುತ್ರ ಗಂಭೀರ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Advertisement

ಘಟನೆ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next