Advertisement

ಬೈಕ್‌ ಸಾಹಸ ರೋಮಾಂಚನಕಾರಿ

02:11 PM May 19, 2019 | Suhan S |

ಶಿರಸಿ: ಮುಂಚೂಣಿಯ ರೇಸಿಂಗ್‌ ಬೈಕ್‌ಗಳ ಬ್ರಾಂಡ್‌ ಕೆಟಿಎಂ ನಗರದಲ್ಲಿ ರೋಮಾಂಚಕ ಬೈಕ್‌ ಸಾಹಸ ಪ್ರದರ್ಶನ ಆಯೋಜಿಸಿತ್ತು. ಚೆನ್ನೈಯಿಂದ ಆಗಮಿಸಿದ್ದ ವೃತ್ತಿಪರ ಸಾಹಸಿ ಬೈಕ್‌ ಚಾಲಕರು ಮೈನವಿರೇಳಿಸುವಂತೆ ಬೈಕ್‌ ಸಾಹಸ ಮತ್ತು ಟ್ರಿಕ್‌ ಪ್ರದರ್ಶಿಸಿದರು.

Advertisement

ನಗರದ ಶಿವಾನಿ ಹೋಟೆಲ್ ಗಾರ್ಡನ್‌ ಪ್ರದೇಶದ‌ಲ್ಲಿ ನಡೆದ ಈ ಸಾಹಸ ಪ್ರದರ್ಶನಕ್ಕೆ ನೂರಾರು ಜನ ಪಾಲ್ಗೊಂಡಿದ್ದರು. ಪ್ರೇಕ್ಷಕರು ಉಸಿರು ಬಿಗಿ ಹಿಡಿಯುವಂತೆ ಕೆಟಿಎಂ ಡ್ಯೂಕ್‌ ಬೈಕ್‌ಗಳಲ್ಲಿ ಚಾಲಕರು ಸಾಹಸ ಪ್ರದರ್ಶಿಸಿದರು.

ಕೆಟಿಎಂ ಬ್ರಾಂಡ್‌ ಅಧಿಕ ಸಾಮರ್ಥ್ಯದ ರೇಸಿಂಗ್‌ ಬೈಕ್‌ಗಳಿಗೆ ಹೆಸರಾಗಿದೆ. ಕೆಟಿಎಂ ಬೈಕ್‌ಗಳು ಚಾಲಕರಿಗೆ ಯಾವ ರೀತಿಯ ರೋಮಾಂಚಕ ಅನುಭವ ನೀಡಬಹುದು ಎನ್ನುವುದನ್ನು ಇಂಥ ಪ್ರದರ್ಶನದ ಮೂಲಕ ಸಾಬೀತುಪಡಿಸಲಾಗುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ವೃತ್ತಿಪರ ಸಾಹಸಿ ಸವಾರರು ಈ ಪ್ರದರ್ಶನ ನೀಡುತ್ತಿದ್ದಾರೆ ಎಂದು ಬಜಾಜ್‌ ಆಟೋ ಲಿಮಿಟೆಡ್‌ನ‌ ಪ್ರೊಬೈಕಿಂಗ್‌ ವಿಭಾಗದ ಉಪಾಧ್ಯಕ್ಷ ಸುಮೀತ್‌ ನಾರಂಗ್‌ ತಿಳಿಸಿದರು. ಇದಕ್ಕೂ ಮೊದಲು ಮಂಗಳೂರು, ಚಿಕ್ಕಮಗಳೂರು, ಕೋಲಾರ, ದಾವಣಗೆರೆ, ಗೋಕಾಕ, ಹೊಸಪೇಟೆ, ಶಿವಮೊಗ್ಗ, ವಿಜಯಪುರ, ಕಂಚಿಪುರ, ಕೊಯಮತ್ತೂರು, ಚೆನ್ನೈ, ಸೇರಿದಂತೆ ಹಲವು ನಗರಗಳಲ್ಲಿ ಕೆಟಿಎಂ ಸಾಹಸ ಪ್ರದರ್ಶನ ಏರ್ಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next