Advertisement

ಕುಷ್ಟಗಿ: ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಬೈಕ್‌ : ಸವಾರ ಸ್ಥಳದಲ್ಲೇ ಸಾವು

12:28 PM Jun 08, 2022 | Team Udayavani |

ಕುಷ್ಟಗಿ: ರಸ್ತೆ ಬದಿಯ ಮರಕ್ಕೆ ಬೈಕ್‌ ಢಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಅಡವಿಬಾವಿ- ಚಿಕ್ಕ ಕೊಡಗಲಿ ತಾಂಡದಲ್ಲಿ ನಡೆದಿದೆ.

Advertisement

ಹೂಲಗೇರಾ ಗ್ರಾಮದ  ದುರಗಪ್ಪ ಹರಿಜನ (45) ಮೃತ ವ್ಯಕ್ತಿ.

ಬಲಗುಂದಿ ಜಾತ್ರೆಯಲ್ಲಿ ಭಾಗವಹಿಸಿ ಚಿಕ್ಕಕೊಡಗಲಿ, ಅಡವಿಬಾವಿ ಮೂಲಕ ವಣಗೇರಿಗೆ ಹೋಗುತ್ತಿದ್ದಾಗ ಚಿಕ್ಕ ಕೊಡಗಲಿ- ಅಡವಿಬಾವಿ ಗ್ರಾಮದ ಮದ್ಯೆ ರಸ್ತೆ ಪಕ್ಕದ ಮರಕ್ಕೆ ಢಿಕ್ಕಿ ಹೊಡೆದು ಸ್ಥಳದಲ್ಲಿ ಮೃತಪಟ್ಟಿದ್ದಾನೆ.

ದುರಗಪ್ಪ ಹರಿಜನ  ಪತ್ನಿ ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾನೆ.

ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next