Advertisement

Manipal ತಿರುವಿನಲ್ಲಿ ಬೈ ಕ್‌ ಅಪಘಾತ: ಓರ್ವ ಸ್ಥಳದಲ್ಲೇ ಸಾವು; ಇನ್ನೋರ್ವನಿಗೆ ಗಾಯ

12:20 AM Mar 18, 2024 | Team Udayavani |

ಉಡುಪಿ: ಅತೀ ವೇಗದಲ್ಲಿ ಚಲಾಯಿಸುತ್ತಿದ್ದ ಬೈಕ್‌ ಸ್ಕಿಡ್‌ ಆಗಿ ಸಹಸವಾರ ಸ್ಥಳದಲ್ಲೇ ಮೃತಪಟ್ಟು ಸವಾರ ಗಾಯಗೊಂಡ ಘಟನೆ ಮಣಿಪಾಲದಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.

Advertisement

ಉದ್ಯಾವರದಲ್ಲಿ ಐಟಿಐ ವ್ಯಾಸಂಗ ಮಾಡುತ್ತಿದ್ದ ಕಾಪು ವಿನ ನಿವಾಸಿ ಅದ್ವೈತ್ (18) ಮೃತಪಟ್ಟವರು. ಹೆತ್ತವ ರಿಗೆ ಓರ್ವನೇ ಪುತ್ರನಾಗಿದ್ದ. ಸವಾರ ಕೂಡ ಕಾಪುವಿನ ನಿವಾಸಿಯಾಗಿದ್ದು, ಪೆರಂಪಳ್ಳಿಯಲ್ಲಿ ಐಟಿಐ ಮಾಡಿಕೊಂಡಿದ್ದ.

ತಡರಾತ್ರಿ ಮಣಿಪಾಲದಲ್ಲಿ ಬರ್ತ್‌ಡೇ ಪಾರ್ಟಿ ಮುಗಿಸಿಕೊಂಡು ಕಾಪುವಿನತ್ತ ತೆರಳುತ್ತಿದ್ದರು. ಸಿಂಡಿಕೇಟ್‌ ಸರ್ಕಲ್‌ಗಿಂತ ತುಸು ಮುಂದೆ ಸಿಗುವ ಕಡಿದಾದ ತಿರುವಿನಲ್ಲಿ ಬೈಕ್‌ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಹೊಡೆಯಿತು. ಹಿಂಬದಿ ಸವಾರ ಡಿವೈಡರ್‌ಗೆ ಎಸೆಯಲ್ಪಟ್ಟಿದ್ದು, ಢಿಕ್ಕಿ ರಭಸಕ್ಕೆ ತಲೆ ನಜ್ಜುಗುಜ್ಜಾಗಿದೆ. ಸವಾರ ಹೆಲ್ಮೆಟ್‌ ಧರಿಸಿದ್ದ ಕಾರಣ ತಲೆಗೆ ಗಾಯವಾಗದಿದ್ದರೂ ಕೈಕಾಲಿಗೆ ಗಾಯ ವಾಗಿದೆ. ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಾಯಕಾರಿ ತಿರುವು
ಈ ತಿರುವು ಬಹಳಷ್ಟು ಅಪಾಯಕಾರಿಯಾಗಿದ್ದು, ಈಗಾಗಲೇ ಹಲವಾರು ವಾಹನಗಳು ಇಲ್ಲಿ ಅಪಘಾತ ಕ್ಕೀಡಾಗಿವೆ. ಸಿಂಡಿಕೇಟ್‌ ಸರ್ಕಲ್‌ನಿಂದ ಕೆಳಕ್ಕೆ ಬರುವಾಗ ಅತೀವೇಗದಿಂದ ಬರುವಾಗಲೇ ಕಡಿದಾದ ತಿರುವಿನಲ್ಲಿ ವಾಹನಗಳು ನಿಯಂತ್ರಣ ತಪ್ಪುತ್ತಿವೆ. ಈ ಭಾಗದಲ್ಲಿ ಎಚ್ಚರಿಕೆ ಫ‌ಲಕ ಅಥವಾ ಸ್ಪೀಡ್‌ ಬ್ರೇಕರ್‌ಗಳನ್ನು ಅಳವಡಿಸಿದರೆ ತಕ್ಕಮಟ್ಟಿಗಾದರೂ ಇಂತಹ ಅಪಘಾತಗಳಿಗೆ ಕಡಿವಾಣ ಹಾಕಬಹುದು ಎನ್ನುತ್ತಾರೆ ಸ್ಥಳೀಯರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next