Advertisement
ಹಲ್ಲೆಗೊಳಗಾದ ತಂದೆ-ತಾಯಿಗಳಾದ ಮಂಜು ಪೂಜಾರಿ ಮತ್ತು ಹೆರಿಯಕ್ಕ ಅವರು ಗಂಭೀರವಾಗಿ ಗಾಯಗೊಂಡಿದ್ದು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೋಟೆಲ್ ಉದ್ಯಮಿಯಾಗಿದ್ದ ರಾಘವ ಪೂಜಾರಿ ಕಳೆದ 3 ವರ್ಷಗಳಿಂದ ಊರಿನಲ್ಲಿಯೇ ನಲೆಸಿದ್ದನು. ಎರಡು ದಿನದ ಹಿಂದೆ ಧರ್ಮಸ್ಥಳಕ್ಕೆ ಹೋಗಿದ್ದು ವಾಪಾಸು ಶನಿವಾರ ಬೆಳಗ್ಗೆ ಮನೆಗೆ ಬಂದು ಬಾಗಿಲು ತೆಗೆಯಲು ಮನೆ ಬಾಗಿಲು ಬಡಿದಿದ್ದು, ಆದರೆ ಬಾಗಿಲು ತೆರೆಯವುದು ತಡವಾಗಿರುವುದರಿಂದ ತಂದೆ (ಮಂಜು ಪೂಜಾರಿ)ಮೇಲೆ ಸಿಟ್ಟುಗೊಂಡು ಮರದ ದೊಣ್ಣೆಯಿಂದ ಹೊಡೆದಿದ್ದಾನೆ ಹಾಗೂ ಇದನ್ನು ತಡೆಯಲು ಬಂದ ತಾಯಿ (ಹೆರಿಯಕ್ಕ) ತೆಲೆ ಮೇಲೆ ಕೂಡಾ ಹೊಡೆದ ಪರಿಣಾಮ ಗಾಯಗೊಂಡು ಅವರಿಬ್ಬರು ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ತಂದೆ -ತಾಯಿ ಗಾಯಗೊಂಡಿರುವುದನ್ನು ಕಂಡು ರಾಘವ ಪೂಜಾರಿ ಹೆದರಿ ಓಡಿ ಹೋಗಿರುತ್ತಾನೆ ಎಂದು ತಿಳಿದು ಮನೆಯವರು ಪರಿಸರ ಸುತ್ತಲು ಹುಡುಕಾಟ ನಡೆಸಿದ್ದರು.
ಮಂಜು ಪೂಜಾರಿ ಅವರಿಗೆ ಮೂವರು ಪುತ್ರರಲ್ಲಿ ರಾಘವ ಪೂಜಾರಿ ಎರಡನೆಯವರರಾಗಿದ್ದಾರೆ. ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ್, ಡಿವೈಎಸ್‌ಪಿ ಪ್ರವೀಣ್ ನಾಯಕ್, ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ರಾಘವ ಪಡೀಲ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಜಿಲ್ಲಾ ಪಂ. ಸದಸ್ಯೆ ಗೌರಿ ದೇವಾಡಿಗ, ತಾಲೂಕು ಪಂ.ಸದಸ್ಯ ಜಗದೀಶ ದೇವಾಡಿಗ ಭೇಟಿ ನೀಡಿದರು.