Advertisement

ಮದರಸಾದಲ್ಲಿ ಅಕ್ರಮ ಶಸ್ತ್ರಾಸ್ತ್ರ;ಎಟಿಎಸ್‌ನಿಂದ 6 ಮಂದಿ ಅರೆಸ್ಟ್‌

01:52 PM Jul 12, 2019 | Vishnu Das |

ಬಿಜ್ನೂರ್‌: ಉತ್ತರಪ್ರದೇಶದ ಎಟಿಎಸ್‌ ಪೊಲೀಸರು ಮಹತ್ವ ದ ಕಾರ್ಯಾಚರಣೆ ನಡೆಸಿ ಮದರಸಾವೊಂದರಲ್ಲಿ ಶಸ್ತ್ರಾಸ್ತ್ರ ಗಳನ್ನು ಸಂಗ್ರಹಿಸಿಟ್ಟಿದ್ದ 6 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

ಬುಧವಾರ ಮಧ್ಯಾಹ್ನ ಶೆರ್‌ಕೋಟ್‌ ಎಂಬಲ್ಲಿ ಕಾರ್ಯಾಚರಣೆ ನಡೆಸಿದ ಎಟಿಎಸ್‌ ಶಸ್ತ್ರಾಸ್ತ್ರಗಳ ಸಹಿತ 6 ಮಂದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದೆ.

ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿರುವ ಶಂಕೆಯ ಮೇಲೆ ದಾರುಲ್‌ ಖುರಾನ್‌ ಹಮೀದಿಯಾ ಮದರಸಾದ ಮೇಲೆ ದಾಳಿ ನಡೆಸಿದ ಎಟಿಎಸ್‌ 3 ಕಂಟ್ರಿಮೇಡ್‌ ಪಿಸ್ತೂಲ್‌ಗ‌ಳು, 32 ಬೋರ್‌ ಪಿಸ್ತೂಲ್‌ಗ‌ಲು ಮತ್ತು ಅಪಾರ ಪ್ರಮಾಣದ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರ ಪೈಕಿ ಓರ್ವ ಬಿಹಾರ ಮೂಲದವನಾಗಿದ್ದು, ಈತ ಮದರಸಾದಲ್ಲಿ ಶಿಕ್ಷಕ ಎಂದು ತಿಳಿದು ಬಂದಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next