Advertisement

ಬಿಜೈ: ಮಕ್ಕಳಿಬ್ಬರಿಗೆ ಎಚ್‌1ಎನ್‌1 ಸೋಂಕು

02:26 AM Mar 28, 2019 | Sriram |

ಮಂಗಳೂರು: ನಗರದ ಬಿಜೈ ಪ್ಲೇ ಸ್ಕೂಲ್‌ ಒಂದರ ಇಬ್ಬರು ಮಕ್ಕಳಲ್ಲಿ ಎಚ್‌1ಎನ್‌1 ಸೋಂಕು ದೃಢಪಟ್ಟಿದ್ದು, ಇದೀಗ ಈರ್ವರೂ ಗುಣಮುಖರಾಗಿದ್ದಾರೆ.

Advertisement

ಪ್ಲೇ ಸ್ಕೂಲ್‌ನ ಒಂಬತ್ತು ಮಕ್ಕಳು, ಸಂಸ್ಥೆಯ ಮುಖ್ಯಸ್ಥೆ ಸಹಿತ 12 ಮಂದಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಶೀತ ಜ್ವರ ಕಾಣಿಸಿಕೊಂಡಿತ್ತು. ವಿಷಯ ತಿಳಿದು ಮಂಗಳವಾರ ಎಲ್ಲರಿಗೂ ರಕ್ತ ಪರೀಕ್ಷೆ ನಡೆಸಲಾಗಿದ್ದು, ಇಬ್ಬರು ಮಕ್ಕಳಲ್ಲಿ ಎಚ್‌1ಎನ್‌1 ಸೋಂಕು ದೃಢಪಟ್ಟಿತ್ತು. ಎಲ್ಲರಿಗೂ ಎಚ್‌1ಎನ್‌1ಗೆ ನೀಡಲಾಗುವ ವಿಶೇಷ ಮಾತ್ರೆ ನೀಡಲಾಗಿದೆ. ಸೋಂಕಿತ ಮಕ್ಕಳೂ ಆರೋಗ್ಯವಾಗಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಮಂಗಳೂರು ತಾಲೂಕು ವೈದ್ಯಾಧಿಕಾರಿ ಡಾ| ನವೀನ್‌ ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಪ್ಲೇ ಸ್ಕೂಲ್‌ಗೆ 10 ದಿನ ರಜೆ ನೀಡಲಾಗಿದೆ. ಶೀತಜ್ವರ ಇರುವವರು ಆದಷ್ಟು ಮನೆಯೊಳಗೇ ವಿಶ್ರಾಂತಿ ಪಡೆಯುವಂತೆ; ಜ್ವರ ಹೆಚ್ಚಾದರೆ ತತ್‌ಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

ಆತಂಕ ಮೂಡಿಸಿದ್ದ ಜ್ವರ
ದ.ಕ. ಜಿಲ್ಲೆಯಲ್ಲಿ ಎಚ್‌1ಎನ್‌1 ಸೋಂಕಿನಿಂದ ಕಳೆದ ಅಕ್ಟೋಬರ್‌ – ನವೆಂಬರ್‌ನಲ್ಲಿ 6 ಮಂದಿ ಸಾವನ್ನಪ್ಪುವ ಮೂಲಕ ಜ್ವರ ಆತಂಕ ಸೃಷ್ಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next