Advertisement
ಪಾನ ನಿಷೇಧದ ಬಳಿಕ ಜನರ ಕೊಳ್ಳುವಿಕೆ ಪ್ರವೃತ್ತಿ ಬದಲಾಗಿದೆ. ಜೇನು ತುಪ್ಪದ ಖರೀದಿ ಶೇ. 380ರಷ್ಟು ಹೆಚ್ಚಾಗಿದ್ದು, ಇದು ಈ ಹಿಂದಿನ ಜೇನು ಖರೀದಿಗೆ ಹೋಲಿಸಿದರೆ 200 ಪಟ್ಟು ಹೆಚ್ಚಾಗಿದೆ. ಮಜ್ಜಿಗೆ ಮಾರಾಟ ಶೇ. 40, ಸುವಾಸನೆಭರಿತ ಹಾಲಿನ ಮಾರಾಟ ಶೇ. 28.4, ಲಸ್ಸಿ ಮಾರಾಟ ಶೇ. 19.7ರಷ್ಟು ಹೆಚ್ಚಾಗಿದೆ. ಎಡಿಆರ್‌ಐ ಅಧ್ಯಯನದ ಪ್ರಕಾರ, ದುಬಾರಿ ಸೀರೆಗಳ ಮಾರಾಟ ಶೇ. 1,751ರಷ್ಟು ಹೆಚ್ಚಾಗಿದ್ದರೆ, ಡ್ರೆಸ್ ಮೆಟೀರಿಯಲ್ ಮಾರಾಟ ಶೇ. 910ರಷ್ಟು, ಸಂಸ್ಕರಿತ ಆಹಾರದ ಮಾರಾಟ ಶೇ. 46ರಷ್ಟು, ಪೀಠೊಪಕರಣಗಳ ಮಾರಾಟ ಶೇ. 20ರಷ್ಟು ಹಾಗೂ ಕ್ರೀಡಾ ಸಲಕರಣೆಗಳ ಮಾರಾಟ ಶೇ. 18ರಷ್ಟು ಹೆಚ್ಚಾಗಿದೆ.