Advertisement

Video: ಶಿಕ್ಷಕನನ್ನು ಅಪಹರಿಸಿ ಕೈ ಕಾಲು ಕಟ್ಟಿ ಬಲವಂತವಾಗಿ ಮದುವೆ ಮಾಡಿಸಿದ ಯುವತಿಯ ಪೋಷಕರು

04:00 PM Dec 14, 2024 | Team Udayavani |

ಬಿಹಾರ: ಶಿಕ್ಷಕನೋರ್ವನನ್ನು ಯುವತಿಯ ಪೋಷಕರೇ ಬಲವಂತವಾಗಿ ಅಪಹರಿಸಿ ಕೈ ಕಾಲು ಕಟ್ಟಿ ಹಾಕಿ ಬಲವಂತವಾಗಿ ಯುವತಿಯ ಜೊತೆ ಮದುವೆ ಮಾಡಿಸಿರುವ ಘಟನೆಯೊಂದು ಬಿಹಾರದ ಬೇಗುಸರಾಯ್‌ನಲ್ಲಿ ಬೆಳಕಿಗೆ ಬಂದಿದೆ.

Advertisement

ಘಟನೆಯಲ್ಲಿ ಯುವತಿಯ ಹೇಳಿಕೆಯಂತೆ ನಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು ಇತ್ತೀಚಿಗೆ ನನ್ನಿಂದ ದೂರವಾಗಿದ್ದಾನೆ ನನ್ನ ಕರೆಗಳನ್ನು ಸ್ವೀಕರಿಸುತ್ತಿಲ್ಲ ಇಬ್ಬರೂ ಜೊತೆಯಾಗಿ ತಿರುಗಾಡುತ್ತಿದ್ದೆವು ಆದರೆ ಈಗ ನನ್ನನ್ನು ದೂರ ಮಾಡಿದ್ದಾನೆ ಎಂದು ಹೇಳಿಕೊಂಡಿದ್ದಾಳೆ ಆದರೆ ಇದನ್ನು ಸುಳ್ಳು ಎಂದು ಹೇಳಿದ ಶಿಕ್ಷಕ ಆಕೆ ನನ್ನ ಮೊಬೈಲ್ ನಂಬರ್ ಪಡೆದುಕೊಂಡು ನನ್ನನ್ನು ಬೆದರಿಸುತಿದ್ದಳು ಆದರೆ ನಾನು ಆಕೆಯ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ ಇದಾದ ಬಳಿಕ ಬೇರೆ ನಂಬರ್ ನಿಂದ ಕರೆ ಮಾಡಿ ನನಗೆ ಬೆದರಿಕೆ ಹಾಕುತ್ತಿದ್ದಳು ಎಂದು ಆರೋಪಿಸಿದ್ದಾನೆ.

ಘಟನೆ ನಡೆದಿದ್ದೇನು:
ಬಿಹಾರದ ಬೇಗುರ್ಸರಾಯ್ ಜಿಲ್ಲೆಯ ರಾಜೌರಾ ನಿವಾಸಿ ಅವನೀಶ್ ಗೆ ಇತ್ತೀಚೆಗೆ ಕತಿಹಾರ್ ಜಿಲ್ಲೆಯಲ್ಲಿ ಸರಕಾರಿ ಶಿಕ್ಷಕನಾಗಿ ಕೆಲಸ ಸಿಕ್ಕಿರುತ್ತದೆ ಅದೇ ರೀತಿ ಆತ ಕತಿಹಾರ್ ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಕೆಲಸಕ್ಕೆ ಹೋಗಿಬರುತ್ತಿದ್ದ ಈ ವೇಳೆ ಗುರುವಾರ ಬೆಳಿಗ್ಗೆ ಬೈಕ್ ನಲ್ಲಿ ಶಾಲೆಗೆ ತೆರಳುವ ವೇಳೆ ಕಾರಿನಲ್ಲಿ ಬಂದ ತಂಡ ಹಣೆಗೆ ಬಂದೂಕು ಇಟ್ಟು ಶಿಕ್ಷಕನನ್ನು ಅಪಹರಿಸಿ ಅಲ್ಲೇ ಇರುವ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾರೆ ಅಲ್ಲಿ ಬಿಹಾರದ ಲಖಿಸರಾಯ್ ಜಿಲ್ಲೆಯ ಗುಂಜನ್ ಎಂಬ ಯುವತಿ ಕೂಡ ಇದ್ದಳು ಎನ್ನಲಾಗಿದೆ. ಈ ವೇಳೆ ಅಪಹರಣ ನಡೆಸಿದ ತಂಡ ಶಿಕ್ಷಕನನ್ನು ಯುವತಿಯ ಜೊತೆ ಮದುವೆ ಮಾಡಿಸಿದ್ದಾರೆ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮದುವೆ ನಡೆಸಿದ ಬಳಿಕ ಇಬ್ಬರನ್ನು ಅವನೀಶ್ ಮನೆಗೆ ಕರೆತಂದಿದ್ದಾರೆ ಈ ವೇಳೆ ಅವನೀಶ್ ಯಾವುದೇ ವಿಷಯ ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾನೆ ಬಳಿಕ ಯುವತಿ ಅವನೀಶ್ ಮನೆಗೆ ಹೋಗಿದ್ದಾಳೆ ಆದರೆ ಅವನೀಶ್ ಮನೆಯವರು ಆಕೆಯನ್ನು ಮನೆಯ ಒಳಗೆ ಬಿಡದೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ ಈ ಕುರಿತು ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

Advertisement

ಇನ್ನು ಇತ್ತ ಶಿಕ್ಷಕ ಅವನೀಶ್ ಕೂಡ ಪೊಲೀಸ್ ಠಾಣೆಯಲ್ಲಿ ಯುವತಿ ಹಾಗೂ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದು ನನ್ನನ್ನು ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿ ದೇವಸ್ಥಾನಕ್ಕೆ ಕರೆದೊಯ್ದು ಯುವತಿ ಜೊತೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ ಎದು ದೂರು ನೀಡಿದ್ದಾನೆ.

ಎರಡೂ ಕಡೆಯ ದೂರನ್ನು ದಾಖಲಿಸಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದು ಯಾರ ತಪ್ಪು ಎಂಬುದು ಇನ್ನಷ್ಟೇ ತಿಳಿದುಬರಬೇಕಾಗಿದೆ.

ಇದನ್ನೂ ಓದಿ: Karkala: ಕುದುರೆಮುಖದಲ್ಲಿ ಹೊತ್ತಿ ಉರಿದ ಉಡುಪಿಯ ಟೂರಿಸ್ಟ್ ವಾಹನ

Advertisement

Udayavani is now on Telegram. Click here to join our channel and stay updated with the latest news.

Next