Advertisement
ಘಟನೆ ಡಿಸೆಂಬರ್ 12 ರಂದು ನಡೆದಿದ್ದು ಎನ್ನಲಾಗಿದ್ದು, ಪ್ರಾಂಶುಪಾಲರು ಮೊಟ್ಟೆ ಕದಿಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಬೆನ್ನಲ್ಲೇ ಪ್ರಾಂಶುಪಾಲರ ವಿರುದ್ಧ ಮಕ್ಕಳ ಪೋಷಕರು ಭಾರಿ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸರಕಾರಿ ಶಾಲೆಗೆ ಮಧ್ಯಾಹ್ನದ ಊಟವನ್ನು ತರಿಸಿದ್ದಾರೆ ಈ ವೇಳೆ ಪ್ರಾಂಶುಪಾಲರು ಊಟ ತಂದ ವಾಹನ ಚಾಲಕನ ಬಳಿ ನಿಂತಿರುವುದು ಕಾಣಬಹುದು ಅಲ್ಲದೆ ಚಾಲಕ ಟೆಂಪೋದ ಒಳಗಿಂದ ಟ್ರೈಯಲ್ಲಿರುವ ಮೊಟ್ಟೆಗಳಲ್ಲಿ ಕೆಲವೊಂದು ಮೊಟ್ಟೆಗಳನ್ನು ಚೀಲಕ್ಕೆ ತುಂಬಿ ಪ್ರಾಂಶುಪಾಲರ ಕೈಗೆ ಕೊಡುವುದು ಕಾಣುತ್ತದೆ. ಆದರೆ ಇಲ್ಲಿ ಮತ್ತೊಂದು ವಿಷೆಯ ಏನೆಂದರೆ ಟ್ರೈ ಯಲ್ಲಿ ತುಂಬಾ ಮೊಟ್ಟೆಗಳು ಇರುವುದು ಕಾಣುತ್ತದೆ ಆದರೆ ಅದರಲ್ಲಿ ಕೆಲವೊಂದು ಮೊಟ್ಟೆಗಳನ್ನು ಮಾತ್ರ ಚೀಲಕ್ಕೆ ಹಾಕಿ ಕೊಟ್ಟಿರುವುದು ಮಾತ್ರ ಸಂಶಯಕ್ಕೆ ಎಡೆ ಮಾಡಿದೆ.
Related Articles
Advertisement
ಇನ್ನು ವೈರಲ್ ಆಗುತ್ತಿರುವ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಾಂಶುಪಾಲರು ಇದು ಸುಳ್ಳು ನಾನು ಮೊಟ್ಟೆಗಳನ್ನು ಕದ್ದಿಲ್ಲ ಬದಲಾಗಿ ಮಧ್ಯಾಹ್ನದ ಊಟ ತಂದಿರುವ ವಾಹನ ಚಾಲಕನ ಬಳಿ ಮೊಟ್ಟೆಗಳನ್ನು ಪಡೆದುಕೊಂಡು ಶಾಲೆಯಲ್ಲಿದ್ದ ಅಡುಗೆಯವರಿಗೆ ನೀಡಿರುವುದಾಗಿ ಹೇಳಿದ್ದಾರೆ.
ಈ ಕುರಿತು ಅಡುಗೆಯವರನ್ನು ಕೇಳಿದರೆ ಪ್ರಾಂಶುಪಾಲರು ಮೊಟ್ಟೆಯ ಚೀಲವನ್ನು ನಮ್ಮ ಕೈಯಲ್ಲಿ ಕೊಟ್ಟು ಪ್ರಾಂಶುಪಾಲರ ಕಚೇರಿಯಲ್ಲಿ ಇಡುವಂತೆ ಹೇಳಿದ್ದಾರೆ ಹಾಗಾಗಿ ನಾವು ಮೊಟ್ಟೆಯ ಚೀಲವನ್ನು ಪ್ರಾಂಶುಪಾಲರ ಕಚೇರಿಯಲ್ಲಿ ಇಟ್ಟು ಬಂದಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ, ಈಗ ಮತ್ತೆ ಆರೋಪ ಪ್ರಾಂಶುಪಾಲರ ಮೇಲೆ ಬಂದಿದ್ದು ಇದನ್ನು ಪ್ರಾಂಶುಪಾಲರು ಒಪ್ಪಿಕೊಳ್ಳುತ್ತಾರಾ ಎಂದು ಕಾದು ನೋಡಬೇಕು.