Advertisement
243 ಕ್ಷೇತ್ರಗಳ ಪೈಕಿ ಎನ್ ಡಿಎ ಮೈತ್ರಿಕೂಟ 133 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಮಹಾಘಟಬಂಧನ್ 97 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಭಾರತೀಯ ಜನತಾ ಪಕ್ಷ 70 ಕ್ಷೇತ್ರಗಳಲ್ಲಿ ಜೆಡಿಯು 49 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಅಲ್ಲದೇ ಮೈತ್ರಿಕೂಟದ ಇತರ ಪಕ್ಷಗಳ(ವಿಐಪಿ, ಎಲ್ ಜೆಪಿ, ಇತರ) ಸ್ಥಾನವೂ ಇದರಲ್ಲಿ ಸೇರಲಿದೆ.
Related Articles
Advertisement
ಬಿಹಾರ ವಿಧಾನಸಭಾ ಚುನಾವಣೆಯ ಪ್ರಸ್ತುತ ಟ್ರೆಂಡ್ ಗಮನಿಸಿದರೆ ಎನ್ ಡಿಎ ಮೈತ್ರಿಕೂಟ ಮತ್ತೆ ಅಧಿಕಾರದ ಗದ್ದುಗೆ ಏರುವ ಸೂಚನೆ ಕಂಡುಬಂದಿದೆ. ಒಂದು ವೇಳೆ ಎನ್ ಡಿಎ ಅಧಿಕಾರಕ್ಕೇರಿದರೆ ನಿತೀಶ್ ಕುಮಾರ್ ಮತ್ತೆ ಸಿಎಂ ಆಗಲಿದ್ದಾರಾ ಎಂಬ ಚರ್ಚೆ ನಡೆಯತೊಡಗಿದೆ.
ಚುನಾವಣೆಯಲ್ಲಿ ನಿತೀಶ್ ಕುಮಾರ್ ಹಾಗೂ ಅವರ ಪಕ್ಷದ ವರ್ಚಸ್ಸು ಕಳೆಗುಂದಿರುವುದು ಸಾಬೀತಾಗಿದ್ದು, ಕೇವಲ 50 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಅಲ್ಲದೇ ಎನ್ ಡಿಎ ಹಿರಯಣ್ಣನಾಗಿದ್ದ ನಿತೀಶ್ ಮೊದಲ ಬಾರಿಗೆ ಜ್ಯೂನಿಯರ್ ಪಾರ್ಟನರ್ ಆಗಿದ್ದಾರೆ. ನಿತೀಶ್ ಕುಮಾರ್ ಅವರ ಆಪ್ತ ಮುಖಂಡರ ಪ್ರಕಾರ ಬ್ರ್ಯಾಂಡ್ ನಿತೀಶ್ ಕುಮಾರ್ ವರ್ಚಸ್ಸು ಇನ್ನೂ ಕಳೆಗುಂದಿಲ್ಲ ಎಂದು ವಾದಿಸಲಾಗುತ್ತಿದೆ. ಆದರೆ ಬಿಹಾರದ ಫಲಿತಾಂಶ ಮಾತ್ರ ಆಡಳಿತ ವಿರೋಧವನ್ನು ಪ್ರತಿಬಿಂಬಿಸುತ್ತಿದೆ.
ಈ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ವರ್ಚಸ್ಸು ಹೆಚ್ಚು ಪರಿಣಾಮಕಾರಿಯಾಗಿದೆ ಎಂಬುದು ಕೈಲಾಶ್ ವಿಜಯ್ ವರ್ಗೀಯ ಪ್ರತಿಕ್ರಿಯೆಯಾಗಿದೆ. ಪ್ರಧಾನಿ ಮೋದಿ ಅವರ ಪ್ರಚಾರದಿಂದ ಭರ್ಜರಿ ವಿಜಯ ನಮ್ಮದಾಗಲಿದೆ. ಬಿಹಾರದಲ್ಲಿನ ಸರ್ಕಾರ ರಚನೆ ಮತ್ತು ಸಿಎಂ ಕುರಿತು ಇಂದು ಸಂಜೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಎನ್ ಡಿಟಿವಿ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಇದನ್ನೂ ಓದಿ:ಮತದಾರರ ಎದುರು ಬಂಡೆ, ಹುಲಿಯಾ, ಟ್ರಬಲ್ ಶೂಟರ್ ಯಾವುದೂ ಇಲ್ಲ: ನಳಿನ್
ಈ ಹೇಳಿಕೆಯ ಪ್ರಕಾರ ಬಿಹಾರದಲ್ಲಿ ಸರ್ಕಾರ ರಚನೆಯಾದರೆ ಹೊಸ ಅಭ್ಯರ್ಥಿ ಕುರಿತು ಬಿಜೆಪಿ ಚಿಂತನೆ ನಡೆಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮತ್ತೊಂದು ನಿಟ್ಟಿನಲ್ಲಿ ಎಲ್ ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಹೆಸರು ಕೂಡಾ ಹೆಚ್ಚು ಚಾಲ್ತಿಯಲ್ಲಿದೆ. ಲೋಕಸಭಾ ಸಂಸದ ಚಿರಾಗ್ ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಜೆಡಿಯು ಹಾಗೂ ನಿತೀಶ್ ಕುಮಾರ್ ವಿರುದ್ಧ ಪ್ರಚಾರ ಮಾಡಿದ್ದರು. ಎಲ್ ಜೆಪಿ ಪಕ್ಷವನ್ನು ಮುನ್ನಡೆಸುವುದಾಗಿ ಚಿರಾಗ್ ಚುನಾವಣಾ ಪ್ರಚಾರದಲ್ಲಿ ಹೇಳಿದ್ದರು. ಅಲ್ಲದೇ ಬಿಜೆಪಿ, ಎಲ್ ಜೆಪಿ ಮೈತ್ರಿಯೊಂದಿಗೆ ಬಿಹಾರದಲ್ಲಿ ಸರ್ಕಾರ ರಚಿಸುವ ಲೆಕ್ಕಾಚಾರ ಇತ್ತು ಎಂದು ವಿಶ್ಲೇಷಿಸಲಾಗುತ್ತಿದೆ. ಒಂದು ವೇಳೆ ಎನ್ ಡಿಎ ಪೂರ್ಣ ಬಹುಮತ ಪಡೆದಲ್ಲಿ ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಹೊಸಮುಖವನ್ನು ಆರಿಸಲಿದೆ ಎಂಬುದು ಸ್ಪಷ್ಟವಾದಂತಿದೆ.