Advertisement
2020 ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರ ವಿರುದ್ಧ ಹೋರಾಡಿ ಪ್ರಾಣ ತ್ಯಾಗ ಮಾಡಿದ ಸೇನಾಧಿಕಾರಿ ಜೈ ಕಿಶೋರ್ ಸಿಂಗ್ ಅವರ ನೆನಪಿಗಾಗಿ ತಂದೆ ಬಿಹಾರದ ವೈಶಾಲಿಯ ಹಳ್ಳಿಯೊಂದರ ಸರಕಾರಿ ಭೂಮಿಯಲ್ಲಿ ಸ್ಮಾರಕ ನಿರ್ಮಿಸಿದ್ದಾರೆ.
Related Articles
Advertisement
ಘಟನೆ ವಿವರ: ರಾಜ್ ಕಪೂರ್ ಸಿಂಗ್ ಅವರು ಕಳೆದ ವರ್ಷದ ಫೆಬ್ರವರಿ 24 ರಂದು ವೈಶಾಲಿ ಜಿಲ್ಲೆಯ ಜಂಡಹಾ ಪೊಲೀಸ್ ಠಾಣೆ ವ್ಯಾಪ್ತಿಯ ಕಜ್ರಿ ಬುಜುರ್ಗ್ ಎಂಬ ಹಳ್ಳಿಯಲ್ಲಿ ತಮ್ಮ ಮಗನ ನೆನಪಿಗಾಗಿ ಸ್ಮಾರಕವನ್ನು ನಿರ್ಮಿಸಿದ್ದರು. ಸ್ಮಾರಕ ಉದ್ಘಾಟನೆ ಸಂದರ್ಭದಲ್ಲಿ ಹಲವಾರು ಸ್ಥಳೀಯ ಸರ್ಕಾರಿ ಅಧಿಕಾರಿಗಳು ಸಹ ಸಮಾರಂಭದಲ್ಲಿ ಭಾಗವಹಿಸಿದ್ದರು.
ಉದ್ಘಾಟನೆಗೊಂಡ ಕೆಲವೇ ದಿನಗಳ ಬಳಿಕ ಇದು ಬೇರೆಯವರಿಗೆ ಸೇರಿದ ಜಾಗವಾಗಿತ್ತು ಎಂದು ತಿಳಿದುಬಂದಿದೆ, ಅಲ್ಲದೆ ಸ್ಮಾರಕ ನಿರ್ಮಾಣ ಮಾಡಲು ಭೂ ಮಾಲೀಕನ ಅನುಮತಿಯನ್ನು ಪಡೆದಿರಲಿಲ್ಲ, ಅಷ್ಟು ಮಾತ್ರವಲ್ಲದೆ ಪ್ರತಿಮೆ ಸುತ್ತ ಗೋಡೆ ಕಟ್ಟಲು ಅಣಿಯಾಗುತ್ತಿದ್ದ ವಿಚಾರ ಗೊತ್ತಾಗುತ್ತಿದ್ದಂತೆ ನೆರೆಕರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಹುತಾತ್ಮ ಯೋಧನ ತಂದೆಯನ್ನು ಥಳಿಸಿ ಬಂಧಿಸಿದ್ದಾರೆ, ಈ ಕುರಿತು ಹೇಳಿಕೆ ನೀಡಿರುವ ಪೊಲೀಸ್ ಅಧಿಕಾರಿ ಸರಕಾರಿ ಭೂಮಿಯಲ್ಲಿ ಪ್ರತಿಮೆ ನಿರ್ಮಾಣ ಮಾಡಲು ಅವಕಾಶವಿಲ್ಲ ಅಲ್ಲದೆ ಸರಕಾರಕ್ಕೆ ಮನವಿ ಮಾಡಿದ್ದಾರೆ ಸರಕಾರವೇ ಪ್ರತಿಮೆ ನಿರ್ಮಾಣ ಮಾಡಲು ಸರಕಾರಿ ಭೂಮಿ ನೀಡುತಿತ್ತು ಅದರ ಬದಲಿಗೆ ಉರುನಲ್ಲಿದ್ದ ಸರಕಾರಿ ಭೂಮಿಯಲ್ಲಿ ಅನುಮತಿ ಪಡೆಯದೇ ಪ್ರತಿಮೆ ನಿರ್ಮಾಣ ಮಾಡಿರುವುದು ಅಪರಾಧ ಎಂದು ಹೇಳಿದ್ದಾರೆ.
ರಾಜ್ ಕಪೂರ್ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆ ಐಪಿಸಿ ಸೆಕ್ಷನ್ 188, 323, 504 ಮತ್ತು 506 ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ವಿವಿಧ ಸೆಕ್ಷನ್‌ಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.