ಪಾಟ್ನಾ: ಮದುವೆ ಪ್ರಸ್ತಾಪವನ್ನು ನಿರಾಕರಿಸಿದ ಕಾರಣಕ್ಕೆ ಬೇಸತ್ತು ಪ್ರಿಯತಮೆಯೊಬ್ಬಳು ತನ್ನ ಪ್ರಿಯಕರನ ಖಾಸಗಿ ಅಂಗವನ್ನೇ ಕತ್ತರಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಅಭಿಲಾಶಾ ಬಂಧಿತೆ ಮಹಿಳೆ.
ಮಧುರಾದಲ್ಲಿ ನರ್ಸಿಂಗ್ ಹೋಮ್ ನಡೆಸುತ್ತಿದ್ದ ಅಭಿಲಾಶ ಅದೇ ಆಸ್ಪತ್ರೆಯ ವಾರ್ಡ್ ಕೌನ್ಸಿಲರ್ ವೇದಪ್ರಕಾಶ್ ಎನ್ನುವವರೊಂದಿಗೆ ಕಳೆದ ಕೆಲ ವರ್ಷಗಳಿಂದ ಸಂಬಂಧದಲ್ಲಿದ್ದಳು. ಈ ಸಮಯದಲ್ಲಿ ಮದುವೆ ಆಗುತ್ತೇನೆ ಎಂದು ನಂಬಿಸಿ ಪ್ರಿಯಕರ ಅಭಿಲಾಶಳೊಂದಿಗೆ ದೈಹಿಕ ಸಂಪರ್ಕವನ್ನು ಮಾಡಿದ್ದ. ಇದರಿಂದ ಅಭಿಲಾಶಾ ಗರ್ಭಿಣಿ ಆಗಿದ್ದಳು
ವೇಧಪ್ರಕಾಶ್ ಇತ್ತೀಚೆಗೆ ಕೋರ್ಟ್ ಮ್ಯಾರೇಜ್ ಆಗುವ ಎಂದು ಹೇಳಿದ್ದ. ಈ ಕಾರಣದಿಂದ ಖುಷಿಯಿಂದ ಅಭಿಲಾಶಾ ಕೈಗೆ ಮೆಹೆಂದಿ ಹಾಕಿಕೊಂಡಿದ್ದಳು. ಆದರೆ ವೇಧಪ್ರಕಾಶ್ ಮತ್ತೊಮ್ಮೆ ಮದುವೆ ಆಗುವುದಾಗಿ ಹೇಳಿ ಮೋಸ ಮಾಡಿದ್ದ. ಇದರಿಂದ ಸಿಟ್ಟಿಗೆದ್ದ ಅಭಿಲಾಶಾ ಪ್ರಿಯಕರನನ್ನು ಕರೆದು ಚಾಕುವಿನಿಂದ ಆತನ ಖಾಸಗಿ ಅಂಗವನ್ನೇ ಕತ್ತರಿಸಿ ಟಾಯ್ಲೆಟ್ ಗೆ ಹಾಕಿದ್ದಾಳೆ.
ಪೊಲೀಸರು ಅಭಿಲಾಶಾಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ವೇಧಪ್ರಕಾಶ್ ನನ್ನು ಗಂಭೀರ ಸ್ಥಿತಿಯಲ್ಲಿ ಪಾಟ್ನಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಮದುವೆ ಆಗುವುದಾಗಿ ನಂಬಿಸಿ ಕಳೆದ 7-8 ಬಾರಿ ಹೇಳಿ ಡೇಟ್ ಫಿಕ್ಸ್ ಮಾಡಿಸಿ ಆ ಬಳಿಕ ಮದುವೆ ಆಗದೆ ಆತ ನನಗೆ ಮೋಸ ಮಾಡಿದ್ದಾನೆ ಇದರಿಂದ ನೊಂದು ಈ ರೀತಿ ಮಾಡಿದ್ದೇನೆ ಎಂದು ಪೊಲೀಸರ ಮುಂದೆ ಅಭಿಲಾಶಾ ಹೇಳಿರುವುದಾಗಿ ವರದಿ ತಿಳಿಸಿದೆ.