Advertisement

Momos: ಸ್ನೇಹಿತರ ಜತೆ ಮೊಮೊಸ್ ತಿಂದು ಯುವಕ ಮೃತ್ಯು; ಕೊಲೆ ಆರೋಪ ಮಾಡಿದ ತಂದೆ

12:21 PM Jul 16, 2023 | Suhan S |

ಪಾಟ್ನಾ: ಮೊಮೊಸ್ ತಿಂದು ಯುವಕನೊಬ್ಬ ಅಸ್ವಸ್ಥನಾಗಿ ಮೃತಪಟ್ಟಿರುವ ಘಟನೆ ಬಿಹಾರದ ಗೋಪಾಲಗಂಜ್ ನಲ್ಲಿ ನಡೆದಿರುವುದು ವರದಿಯಾಗಿದೆ.

Advertisement

ಬಿಪಿನ್ ಕುಮಾರ್ ಪಾಸ್ವಾನ್ (25) ಮೃತ ಯುವಕ.

ಮೊಬೈಲ್‌ ಶಾಪ್‌ ನಲ್ಲಿ ಕೆಲಸ ಮಾಡುತ್ತಿರುವ ಬಿಪಿನ್‌ ಕುಮಾರ್‌ ಗುರುವಾರ (ಜು.13 ರಂದು) ಕೆಲಸ ಮುಗಿದ ಬಳಿಕ ಸ್ನೇಹಿತರೊಂದಿಗೆ ಸೇರಿಕೊಂಡಿದ್ದಾರೆ. ಈ ವೇಳೆ ಸ್ನೇಹಿತರು “ಮೊಮೊಸ್ ತಿನ್ನುವ ಚಾಲೇಂಜ್”‌ ನ್ನು ಇಟ್ಟು  ಯಾರೂ ಎಷ್ಟು ಮೊಮೊಸ್ ಎಂದು ಬಿಪಿನ್ ಕುಮಾರ್ ಪಾಸ್ವಾನ್ ಅವರಿಗೂ ಮೊಮೊಸ್‌ ತಿನ್ನಿಸಿದ್ದಾರೆ.

ಇದನ್ನೂ ಓದಿ: Flight Fight: ವಿಮಾನದಲ್ಲಿ ಏರ್ ಇಂಡಿಯಾ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ಸಹ ಪ್ರಯಾಣಿಕ

ಅತಿಯಾದ ಮೊಮೊಸ್‌ ತಿಂದ ಪರಿಣಾಮ ಬಿಪಿನ್ ಪಾಸ್ವಾನ್ ಅಸ್ವಸ್ಥರಾಗಿದ್ದಾರೆ. ಪ್ರಜ್ಞಾಹೀನರಾಗಿ ಬಿದ್ದ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ  ಆಸ್ಪತ್ರೆಗೆ ತರುವ ವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

Advertisement

ನನ್ನ ಮಗನಿಗೆ ವಿಷಹಾಕಿ ಸಾಯಿಸಿದ್ದಾರೆ..

ಆದರೆ ಇತ್ತ ಪಾಸ್ವಾನ್‌ ಅವರ ತಂದೆ ಕೊಲೆ ಮಾಡಿರುವ ಆರೋಪವನ್ನು ಮಾಡಿದ್ದಾರೆ. ನನ್ನ ಮಗನನ್ನು ಬೇಕಂತಲೇ ಬಲವಂತವಾಗಿ ವಿಷ ಹಾಕಿಸಿದ ಮೊಮೊಸ್‌ ನ್ನು ತಿನ್ನಿಸಿ ಕೊಲೆಗೈದಿದ್ದಾರೆ ಎಂದು ಸ್ನೇಹಿತರ ಮೇಲೆ ಆರೋಪವನ್ನು ಮಾಡಿದ್ದಾರೆ.

ಸದ್ಯ ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದು, ವೈದ್ಯಕೀಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next