Advertisement

ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿ ಬಿಹಾರ ರಾಜ್ಯಪಾಲ ರಾಮ ನಾಥ್‌ ಕೋವಿಂದ್‌

03:18 PM Jun 19, 2017 | udayavani editorial |

ಹೊಸದಿಲ್ಲಿ : ರಾಷ್ಟ್ರಪತಿ ಹುದ್ದೆಗೆ ಭಾರತೀಯ ಜನತಾ ಪಕ್ಷ ತನ್ನ ಅಭ್ಯರ್ಥಿಯಾಗಿ ಬಿಹಾರ ರಾಜ್ಯಪಾಲ ರಾಮ ನಾಥ ಕೋವಿಂದ್‌ ಅವರನ್ನು ಆಯ್ಕೆಮಾಡಿದೆ ಎಂದು ಪಕ್ಷದ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ. 

Advertisement

ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಮನಮೋಹನ್‌ ಸಿಂಗ್‌ ಅವರೊಂದಿಗೆ ಔಪಚಾರಿಕ ಮಾತುಕತೆ ನಡೆಸಿ ರಾಮ ನಾಥ ಕೋವಿಂದ್‌ ಅವರಿಗೆ ಪಕ್ಷದ ಬೆಂಬಲವನ್ನು ಕೋರಿದ್ದಾರೆ.

ಪ್ರಧಾನಿ ಮೋದಿ ಹಾಗೂ ಇತರ ಉನ್ನತ ನಾಯಕರನ್ನು  ಭೇಟಿಯಾದ ಬಳಿಕ ಪಕ್ಷಾಧ್ಯಕ್ಷ ಅಮಿತ್‌ ಶಾ ಅವರು ಭೇಟಿಯಾದ ಬಳಿಕ ಈ ಹೇಳಿಕೆಯನ್ನು ನೀಡಿದರು. 

ವಿರೋಧ ಪಕ್ಷಗಳು ಇಂದು ಬೆಳಗ್ಗೆ ‘ಬಿಜೆಪಿ ರಾಷ್ಟ್ರಪತಿ ಹುದ್ದೆಗೆ ತನ್ನ ಅಭ್ಯರ್ಥಿಯನ್ನು ಪ್ರಕಟಿಸಬೇಕು; ಆಗ ಮಾತ್ರವೇ ಆ ಅಭ್ಯರ್ಥಿಗೆ ನಮ್ಮ ಬೆಂಬಲ ಇದೆಯೇ ಇಲ್ಲವೇ ಎಂಬುದನ್ನು ನಾವು ತೀರ್ಮಾನಿಸಲು ಸಾಧ್ಯವಾಗುವುದು’ ಎಂಬ ಖಡಕ್‌ ಸಂದೇಶವನ್ನು ರವಾನಿಸಿದ್ದವು. 

ರಾಜ್ಯಪಾಲ ರಾಮ ನಾಥ ಕೋವಿಂದ್‌ ಅವರು 71ರ ಹರೆಯದ ಓರ್ವ ದಲಿತರಾಗಿದ್ದು  ಕಳೆದ ಮೂರು ವರ್ಷಗಳಿಂದ ಅವರು ಬಿಹಾರ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಾಜಿ ವಕೀಲರಾಗಿದ್ದು ದಿಲ್ಲಿ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ನಡೆಸಿ ಬಳಿಕ 1990ರ ದಶಕದ ಆರಂಭದ ವರೆಗೂ ಅವರು ಸುಪ್ರೀಂ ಕೋರ್ಟಿನಲ್ಲಿ ವಕೀಲ ವೃತ್ತಿ ಕೈಗೊಂಡಿದ್ದರು. 

Advertisement

ಹಿರಿಯ ಬಿಜೆಪಿ ನಾಯಕರು ರಾಮ ನಾಥ ಕೋವಿಂದ್‌ ಅವರಿಗೆ ಬೆಂಬಲ ಯಾಚಿಸಲು ವಿವಿಧ ವಿರೋಧ ಪಕ್ಷಗಳನ್ನು ಸಂಪರ್ಕಿಸುತ್ತಿದ್ದಾರೆ. 

ಒಂದೊಮ್ಮೆ ವಿರೋಧ ಪಕ್ಷಗಳು ತಮ್ಮದೇ ಅಭ್ಯರ್ಥಿಯನ್ನು ನಿಲ್ಲಿಸಿ ಚುನಾವಣೆ ನಡೆಯುವುದನ್ನು ಅನಿವಾರ್ಯಗೊಳಿಸಿದಲ್ಲಿ ಆಗ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ದಕ್ಷಿಣದ ಪ್ರಾದೇಶಿಕ ಪಕ್ಷಗಳ ನೆರವಿನಿಂದ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಯೋಜನೆ ಹೊಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next