ಪಾಟ್ನಾ: ಒಡಿಶಾ ಲೋಕಸಭಾ ಚುನಾವಣೆಯ 40 ಕ್ಷೇತ್ರಗಳ ಮತ ಎಣಿಕೆ ಮುಂದುವರಿದಿದ್ದು, ಅತೀ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ನಾಲ್ಕನೇ ಅತೀ ದೊಡ್ಡ ರಾಜ್ಯವಾಗಿದೆ. ಏಪ್ರಿಲ್ 19ರಿಂದ ಜೂನ್ 1ರವರೆಗಿನ ಏಳು ಹಂತದ ಚುನಾವಣೆಯಲ್ಲಿ ಮತದಾನ ನಡೆದಿತ್ತು.
ಇದನ್ನೂ ಓದಿ:Kalaburagi; ಎಐಸಿಸಿ ಅಧ್ಯಕ್ಷರ ತವರಿನಲ್ಲಿ ಮತ್ತೆ ಕೈ ಹಿಡಿದ ಮತದಾರ: ಖರ್ಗೆ ಅಳಿಯ ಸಂಸತ್ ಗೆ
ಭಾರತೀಯ ಜನತಾ ಪಕ್ಷ ನೇತೃತ್ವದ ಎನ್ ಡಿಎ ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದಂತೆ ಈ ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸುವ ನಿರೀಕ್ಷೆ ಹೊಂದಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಜೆಡಿಯು 16, ಎಲ್ ಜೆಪಿ 6 ಹಾಗೂ ಕಾಂಗ್ರೆಸ್ 01 ಕ್ಷೇತ್ರದಲ್ಲಿ ಜಯ ಗಳಿಸಿತ್ತು.
ಒಟ್ಟು 40 ಕ್ಷೇತ್ರಗಳಲ್ಲಿ ಈ ಬಾರಿ ಜೆಡಿಯು 14 ಸ್ಥಾನಗಳಲ್ಲಿ, ಬಿಜೆಪಿ 12, ಎಲ್ ಜೆಪಿ ಆರ್ ವಿ 05, ಆರ್ ಜೆಡಿ 4, ಕಾಂಗ್ರೆಸ್ 2, ಸಿಪಿಐ(ಎಂಎಲ್) 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚಿರಾಗ್ ಪಾಸ್ವಾನ್ ಮತ್ತು ಜಿತಿನ್ ರಾಮ್ ಮಾಂಜಿ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿರುವುದಾಗಿ ವರದಿ ತಿಳಿಸಿದೆ.