Advertisement

Bihar DCM ಶಪಥ ಪೂರ್ಣ; ಅಯೋಧ್ಯೆ ರಾಮನಿಗೆ ಪೇಟ ಅರ್ಪಣೆ

03:28 PM Jul 03, 2024 | Team Udayavani |

ಅಯೋಧ್ಯೆ: ಬಿಹಾರದ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ 22 ತಿಂಗಳ ನಂತರ ಅಯೋಧ್ಯೆಯಲ್ಲಿ ಅಂತಿಮವಾಗಿ ತಮ್ಮ ಪೇಟವನ್ನು ತೆಗೆದು ರಾಮನಿಗೆ ಸಮರ್ಪಿಸುವ ಮೂಲಕ ಶಪಥ ಪೂರ್ಣಗೊಳಿಸಿದ್ದಾರೆ.

Advertisement

ಬುಧವಾರ ಬೆಳಗ್ಗೆ ಸರಯು ನದಿಯಲ್ಲಿ ಸ್ನಾನ ಮಾಡಿ,ಕೇಶಮುಂಡನ ಮಾಡಿಸಿ ಸಾಂಕೇತಿಕವಾಗಿ ಶ್ರೀರಾಮನಿಗೆ ಕಳೆದ 22 ತಿಂಗಳಿಂದ ಧರಿಸಿದ್ದ ಪೇಟವನ್ನು ಅರ್ಪಿಸಿದರು. ಚೌಧರಿ ಅವರ ಬೆಂಬಲಿಗರು ಉತ್ಸಾಹದಿಂದ “ಜೈ ಶ್ರೀ ರಾಮ್” ಎಂದು ಘೋಷಣೆಗಳನ್ನು ಮೊಳಗಿಸಿದರು. ನನ್ನ ಪೇಟವನ್ನು ಭಗವಾನ್ ಶ್ರೀರಾಮನಿಗೆ ಭಕ್ತಿಪೂರ್ವಕವಾಗಿ ಅರ್ಪಿಸಿದ್ದೇನೆ ಎಂದು ಚೌಧರಿ ಹೇಳಿದರು.

ಸಾಮ್ರಾಟ್ ಚೌಧರಿ ಶಪಥವೇನಾಗಿತ್ತು?
“ಅಂದು ನಾನು ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಪೇಟವನ್ನು ಧರಿಸುವುದಾಗಿ ವಾಗ್ದಾನ ಮಾಡಿದ್ದೆ ನಿಜ. ಆದರೆ ಅವರು ಇಂಡಿಯಾ ಮೈತ್ರಿಕೂಟವನ್ನು ತೊರೆದು ನಮ್ಮ ಎನ್‌ಡಿಎ ಮೈತ್ರಿಕೂಟಕ್ಕೆ ಮರಳಿದ್ದಾರೆ, ನಾನು ಪೇಟ ಅರ್ಪಿಸುವ ಸಮಯ ಬಂದಿದೆ. ನಿತೀಶ್ ಕುಮಾರ್ ಅವರು ಇಂಡಿಯಾ ಮೈತ್ರಿಕೂಟದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಎನ್‌ಡಿಎಗೆ ಮರಳಿದ ದಿನವೇ ನಾನು ಭಗವಾನ್ ರಾಮನಿಗೆ ಈ ಪೇಟವನ್ನು ಸಮರ್ಪಿಸುವುದಾಗಿ ಘೋಷಿಸಿದ್ದೇನೆ ಎಂದು ಚೌಧರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಮಹಾಘಟಬಂಧನ್ ಮೈತ್ರಿಯೊಂದಿಗೆ ಭಿನ್ನಾಭಿಪ್ರಾಯದ ನಂತರ ನಿತೀಶ್ ಕುಮಾರ್ ಈ ವರ್ಷದ ಜನವರಿಯಲ್ಲಿ ಎನ್‌ಡಿಎ ಬಣವನ್ನು ಮರಳಿ ಸೇರಿಕೊಂಡಿದ್ದರು. ಕಳೆದ ಹತ್ತು ವರ್ಷಗಳಲ್ಲಿ ಇದು ಐದನೇ ಬಾರಿ ಅವರ ಬಣ ಬದಲಾವಣೆಯಾಗಿತ್ತು.

ಬಿಜೆಪಿಯೊಂದಿಗೆ ಕೈಜೋಡಿಸಿ ಒಂಬತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಬದಲಾದ ಸನ್ನಿವೇಶದಲ್ಲಿ ರಾಜಕೀಯ ವೈಮನಸ್ಸು ಮರೆತು ನೂತನ ಸರಕಾರ ರಚನೆಯಾಗಿ ಬಿಜೆಪಿ ನಾಯಕರಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಸಿನ್ಹಾ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next