ಬಿಹಾರ: ಬಿಹಾರ ಚುನಾವಣೆಗೆ ಶಿಯೋಹರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸ್ವತಂತ್ರ ಅಭ್ಯರ್ಥಿ ನಾರಾಯಣ್ ಸಿಂಗ್ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶನಿವಾರ (ಅ. 24) ಶಿಯೋಹರ್‌ನಲ್ಲಿ ಪ್ರಚಾರ ನಡೆಸುತ್ತಿರುವಾಗ ಈ ಘಟನೆ ನಡೆದಿದ್ದು, ದಾಳಿಯ ವೇಳೆ ಗಾಯಗೊಂಡಿದ್ದ ನಾರಾಯಣ್ ಸಿಂಗ್ ಅವರ ಇಬ್ಬರು ಸಹಚರರಲ್ಲಿ ಒಬ್ಬರು ಭಾನುವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ನಾರಾಯಣ್ ಸಿಂಗ್ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾರೆ. ಪರಿಣಾಮ ಸಿಂಗ್ ಸ್ಥಳದಲ್ಲೇ ಮೃತಪಟ್ಟರೇ, ಇಬ್ಬರ ಸಹಚರರು ಗಂಭೀರ ಗಾಯಗೊಂಡಿದ್ದರು.
ಸಹಚರರನ್ನು ಸಂತೋಷ್ ಕುಮಾರ್ ಮತ್ತು ಅಭಯ್ ಕುಮಾರ್ ಎಂದು ಗುರುತಿಸಲಾಗಿದೆ. ಇವರಿಬ್ಬರನ್ನು ಆಸ್ಪತ್ರೆಗೆ ದಾಖಲಾಯಿಸಲಾಯಿತಾದರೂ ಸಂತೋಷ್ ಕುಮಾರ್ ಭಾನುವಾರ (ಅ. 25) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಲೋಕಸಭೆಗೆ ಬಿಜೆಪಿಯಿಂದ ಟಿಕೆಟ್ ಕೊಟ್ಟರೆ ಸ್ಪರ್ಧಿಸಲು ಸಿದ್ಧ: ‘ಕೈ’ ನಾಯಕ ಪ್ರಕಾಶ ಹುಕ್ಕೇರಿ
ಈ ಕುರಿತು ಪ್ರತಿಕ್ರಿಯೆ ನೀಡಿದ ಗಾಯಗೊಂಡಿರುವ ಅಭಯ್ ಕುಮಾರ್, ನಾರಾಯಣ್ ಸಿಂಗ್ ಪ್ರಚಾರ ನಡೆಸುತ್ತಿದ್ದ ವೇಳೆಯಲ್ಲಿ ಸುಮಾರು 8 ರಿಂದ 10 ಮಂದಿ ಇದ್ದ ದುಷ್ಕರ್ಮಿಗಳ ತಂಡ, ಜನರ ಮಧ್ಯೆಯೇ ಗುಂಡಿನ ದಾಳಿ ನಡೆಸಿದೆ. ನಾರಾಯಣ್ ಸಿಂಗ್ ಅವರನ್ನು ಉಳಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದರು.
ಈ ವೇಳೆ ನಾರಾಯಣ್ ಸಿಂಗ್ ಬೆಂಬಲಿಗರು ಕೂಡ ದುಷ್ಕರ್ಮಿಗಳನ್ನು ಬೆನ್ನತ್ತಿದ್ದು, ಇಬ್ಬರನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ ಎಂದು ವರದಿಯಾಗಿದೆ. ಶಿಯೋಹರ್ ಎಸ್ ಪಿ ಸಂತೋಷ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆಗೆ ಆದೇಶಿಸಿದ್ದಾರೆ.
ಇದನ್ನೂ ಓದಿ: ಹಬ್ಬದ ಪ್ರಯುಕ್ತ ಸೈನಿಕರಿಗಾಗಿ ಮನೆಗಳಲ್ಲಿ ದೀಪ ಬೆಳಗಿ: ದೇಶದ ಜನತೆಗೆ ಪ್ರಧಾನಿ ಮೋದಿ ಕರೆ