Advertisement

ಪ್ರವಾಹ ಪರಿಸ್ಥಿತಿ ವೀಕ್ಷಣೆ ವೇಳೆ ನೀರಿಗೆ ಬಿದ್ದ ಬಿಜೆಪಿ ಸಂಸದ: ವಿಡಿಯೋ ವೈರಲ್

10:24 AM Oct 04, 2019 | Team Udayavani |

ಪಾಟ್ನಾ: ಬಿಜೆಪಿ ಸಂಸದ ರಾಮ್ ಕೃಪಾಲ್ ಯಾದವ್ ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರವಾಹ ಪರಿಸ್ಥಿತಿ ಅವಲೋಕನ ಮಾಡುತ್ತಿದ್ದ ವೇಳೆ ಆಯತಪ್ಪಿ ನೀರಿಗೆ ಬಿದ್ದ ಘಟನೆ ನಡೆದಿದೆ. ಕೂಡಲೇ ಎಚ್ಚೆತ್ತುಕೊಂಡ ಸ್ಥಳೀಯರು ಅವರನ್ನು ನೀರಿನಿಂದ ಮೆಲಕ್ಕೆತ್ತಿ ರಕ್ಷಿಸಿದ್ದಾರೆ.

Advertisement

ಪಾಟಲಿಪುರ ಕ್ಷೇತ್ರದ ಸಂಸದರಾಗಿರುವ ರಾಮ್ ಕೃಪಾಲ್ ಯಾದವ್  ಬೋಟ್  ಮೇಲೆ ನಿಂತು ಪ್ರವಾಹ ಪೀಡಿತ ಪ್ರದೇಶಗಳ ಪರಿಸ್ಥಿತಿ ವೀಕ್ಷಣೆ ಮಾಡುತ್ತಿದ್ದರು. ಜೊತೆಗೆ ಹಲವು ಜನರು ಕೂಡ ನಿಂತಿದ್ದರು. ಈ ವೇಳೆ ಆಯತಪ್ಪಿದ್ದ ಬೋಟ್ ಮಗುಚಿಕೊಂಡಿತು. ಪರಿಣಾಮವಾಗಿ  ಸಂಸದರು ಸೇರಿದಂತೆ ಹಲವರು ನೀರಿನೊಳಗೆ ಬಿದ್ದಿದ್ದರು.

ಇದೇ ವೇಳೆ ನಿತೀಶ್ ಕುಮಾರ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಅವರು. ಪ್ರವಾಹ ಪೀಡಿತ ಗ್ರಾಮೀಣ ಪ್ರದೇಶಗಳನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಆಹಾರದ ಕೊರತೆಯಿಂದಾಗಿ ಜನರು ಬಳಲುತ್ತಿದ್ದಾರೆ.  ಜಾನುವಾರುಗಳು ನೀರುಪಾಲಾಗಿವೆ. ಜನರನ್ನು ರಕ್ಷಿಸಲು ಸಮರ್ಪಕ ಸೌಲಭ್ಯಗಳಿಲ್ಲ. ಪ್ರವಾಹ ಪರಿಸ್ಥಿತಿಯನ್ನು ವೀಕ್ಷಿಸಲು ದೋಣಿಯ ವ್ಯವಸ್ಥೆ ಕೂಡ ಮಾಡಿರಲಿಲ್ಲ. ಅದ್ದರಿಂದ ಅನಿವಾರ್ಯವಾಗಿ ಬಿದಿರಿನಿಂದ ಮಾಡಿದ ಸಣ್ಣ ಬೋಟ್ ಅನ್ನು ಅವಲಂಬಿಸಬೇಕಾಯಿತು. ಇದರಿಂದಲೇ ಆಯತಪ್ಪಿ ಬೀಳುವಂತಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next