Advertisement

ವ್ಯಕ್ತಿತ್ವದ ವ್ಯಾಖ್ಯಾನ ಮಾಡುವ ಬಿಗಿಲ್‌

06:01 PM Feb 06, 2020 | mahesh |

ತಮಿಳಿನ ಬಿಗಿಲ್‌ ಚಿತ್ರ ಕಲಾತ್ಮಕವಾಗಿಯೂ ಚೆನ್ನಾಗಿದೆ. ಕಮರ್ಷಿಯಲ್‌ ಧೋರಣೆಯಲ್ಲಿ ನೋಡಿದರೂ ಚೆನ್ನಾಗಿದೆ. ಅಟ್ಲೀ ಕುಮಾರ್‌ ನಿರ್ದೇಶನದ ಈ ಚಿತ್ರ ಕಳೆದ ಆಕ್ಟೋಬರ್‌ನಲ್ಲಿ ತೆರೆಕಂಡಿತು. “ಎÇÉಾ ಮಹಿಳೆಯರಿಗೋಸ್ಕರ ಸಮರ್ಪಿಸಲಾದ ಚಿತ್ರ’ ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ.

Advertisement

ಈ ಚಿತ್ರದಲ್ಲಿ ತಮಿಳು ನಟ ವಿಜಯ್‌ ದ್ವಿಪಾತ್ರದಲ್ಲಿ ನಟನಾಗಿ ನಟಿಸಿ¨ªಾರೆ. ಆದರೆ, ಅವರೊಬ್ಬರೇ ನಾಯಕ ನಟ ಎನ್ನುವಂತಿಲ್ಲ. ಸಿನಿಮಾದಲ್ಲಿ ಬರುವ‌ ಪ್ರತಿಯೊಂದು ಪಾತ್ರವೂ ಪ್ರಮುಖವಾಗಿ ಕಾಣುತ್ತದೆ. ಪ್ರೇಮಕತೆಯಾದರೂ, ಸಾಹಸ ದೃಶ್ಯಗಳು ಮತ್ತು ಹಾಡುಗಳೊಂದಿಗೆ ಚಿತ್ರವು ಕಲಾತ್ಮಕವಾಗಿ ಮೂಡಿಬಂದಿದೆ. ಆದ್ದರಿಂದಲೇ ಚಿತ್ರ ಮೊದಲಿನಿಂದ ಕೊನೆಯವರೆಗೂ ವೀಕ್ಷಕರ ಕುತೂಹಲವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಮಹಿಳಾ ಫ‌ುಟ್‌ಬಾಲ್‌ ತಂಡಕ್ಕೆ ಮಾರ್ಗದರ್ಶನ ನೀಡುವ ಕೋಚ್‌ ಒಬ್ಬರ ಹಿನ್ನೆಲೆಯನ್ನು ಆಧರಿಸಿ ಸಾಗುವ ಚಿತ್ರವಿದು. ಅದೇ ವೇಳೆಗೆ ಹೆಣ್ಣುಮಕ್ಕಳ ಮೇಲೆ ಆಗುವ ಶೋಷಣೆಯನ್ನೂ ಸೂಕ್ಷ್ಮವಾಗಿ ತಿಳಿಸುವ ದೃಶ್ಯಗಳೂ ಮನಮುಟ್ಟುತ್ತವೆ. ಎಡರು ತೊಡರುಗಳನ್ನು ಮೆಟ್ಟಿ ನಿಂತು ಸಾಧನೆಯ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವ ಮಹಿಳೆಯರು ಸದಾ ಮಾದರಿಯಾಗಿ ನಿಲ್ಲುತ್ತಾರೆ. ಅಂತಹ ಸಂದೇಶ ಈ ಚಿತ್ರದಲ್ಲಿ ಇರುವುದರಿಂದ ನಿಜಕ್ಕೂ ಸಕಾರಾತ್ಮಕ ಚಿತ್ರವೆನಿಸಿತು. ಈ ಚಿತ್ರದ ಹಾಡುಗಳೂ ಅದ್ಭುತವಾಗಿವೆ. ಅದರಲ್ಲೂ “ಸಿಂಗಪೆಣ್ಣೆ …’ ಎಂಬ ಹಾಡು ಮತ್ತೆ ಮತ್ತೆ ಗುನುಗುವಂತಿದೆ.

ಒಬ್ಬ ವ್ಯಕ್ತಿಯನ್ನು ಮೇಲ್ನೋಟದಲ್ಲಿಯೇ ಅಳೆಯಬಾರದು ಎಂದು ಹೇಳುವ ಸಿನಿಮಾ ಇದು. “ನಾನು ದಪ್ಪ ಇದ್ದೇನೆ, ಕಪ್ಪಾಗಿದ್ದೇನೆ’ ಎಂದೆಲ್ಲ ಕೀಳರಿಮೆ ಹೊಂದಿರುವ ಬಹಳಷ್ಟು ಜನರಿಗೆ, “ಸಾಧನೆಗೆ ಸೌಂದರ್ಯ ಮುಖ್ಯವಲ್ಲ , ಬದಲಾಗಿ ಸಾಧಿಸುವ ಛಲ ಇರಬೇಕು’ ಎಂಬ ಸಂದೇಶ ಸಾರುತ್ತದೆ.

ಗ್ರೀಷ್ಮಾ ಭಂಡಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next