ಚಿತ್ರದುರ್ಗ: “ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ರಾಜ್ಯಕ್ಕೆ ದೊಡ್ಡ ಲೀಡರ್. ಹಾಗಾಗಿ ನನಗೆ ಕೇಳುವ ಪ್ರಶ್ನೆಯನ್ನು ಅವರ ಪಕ್ಷದ ನಾಯಕರಾದ ರಾಹುಲ್ ಗಾಂಧಿಗೆ ಕೇಳಿದರೆ ಉತ್ತಮ’ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಶಾಸಕ ಬಿ. ಶ್ರೀರಾಮುಲು ವ್ಯಂಗ್ಯಭರಿತ ಸಲಹೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯನವರು ಸೋಲುವ ಭಯದಿಂದ ಬಾದಾಮಿಗೆ ಬಂದ್ರು, ದೇವೇಗೌಡರು ಹಾಸನದಿಂದ ತುಮಕೂರಿಗೆ ಹೋದ್ರು, ರಾಹುಲ್ ಗಾಂಧಿ ಅಮೇಥಿಯಿಂದ ಕೇರಳದ ವಯನಾಡ್‌ನಲ್ಲಿ ಸ್ಪರ್ಧಿಸಿದ್ರು.
ಈ ನಾಯಕರಿಗೆ ಅವರ ಕ್ಷೇತ್ರಗಳ ಸಂಬಂಧ ಮುಗೀತಾ ಎಂದು ಡಿಕೆಶಿ ಕೇಳಲಿ ಎಂದರು. ಬಿಜೆಪಿಯ 30 ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂದು ಸಚಿವ ವೆಂಕಟರಮಣಪ್ಪ ಹೇಳಿದ್ದಾರೆ. ತಾಕತ್ತಿದ್ದರೆ ಅವರು ಹೆಸರು ಬಹಿರಂಗಪಡಿಸಲಿ ಎಂದರು.
ಮನ್ಸೂರ್ ಖಾನ್‌ಗೆ ಮೈತ್ರಿ ಸರ್ಕಾರವೇ ರಕ್ಷಣೆ ನೀಡುತ್ತಿದೆ. ಮನ್ಸೂರ್ ಖಾನ್, ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ, ಜಮೀರ್ ಅಹಮ್ಮದ್ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಮಂತ್ರಿಗಳ ಜತೆ ಸಂಪರ್ಕದಲ್ಲಿದ್ದಾನೆ. ಮುಸ್ಲಿಂ ಸಮುದಾಯದ ಮಹಿಳೆಯರ ಕಣ್ಣೀರಿನ ಶಾಪ ಮೈತ್ರಿ ಸರ್ಕಾರಕ್ಕೆ ತಟ್ಟದೇ ಬಿಡಲ್ಲ. ಅವರ ಶಾಪದಿಂದಲೇ ಮೈತ್ರಿ ಸರ್ಕಾರ ಪತನವಾಗುತ್ತದೆ.
-ಶ್ರೀರಾಮುಲು, ಶಾಸಕ