ಪ್ಯಾಲೆಸ್ತೇನ್: ಪ್ರಮುಖ ಗಡಿ ಪ್ರದೇಶದಿಂದ ಕೇವಲ ಕೆಲವೇ ನೂರು ಮೀಟರ್ ಗಳಷ್ಟು ದೂರದಲ್ಲಿರುವ ಗಾಜಾಪಟ್ಟಿಯಲ್ಲಿ ಹಮಾಸ್ ಭಯೋತ್ಪದಕರ ಅತೀ ದೊಡ್ಡ ಸುರಂಗವನ್ನು ಇಸ್ರೇಲ್ ಸೇನಾಪಡೆ ಪತ್ತೆಹಚ್ಚಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:Movies: ಬಾಕ್ಸ್ ಆಫೀಸ್ ಗುದ್ದಾಟಕ್ಕೆ ರೆಡಿಯಾದ ಡಂಕಿ, ಸಲಾರ್
ಲಘು ವಾಹನಗಳು ಕೂಡಾ ಈ ಸುರಂಗ ಮಾರ್ಗದಲ್ಲಿ ಸಂಚರಿಸಲು ಸಾಧ್ಯವಾಗುವಷ್ಟು ಬೃಹತ್ ಗಾತ್ರ ಹೊಂದಿದೆ. ಈ ಸುರಂಗದ ಕುರಿತು ವರದಿ ಮಾಡಲು ಎಎಫ್ ಪಿ ಫೋಟೊಗ್ರಾಫರ್ ಗೆ ಅನುಮತಿ ನೀಡಲಾಗಿದೆ ಎಂದು ವರದಿ ವಿವರಿಸಿದೆ.
ಈ ಸುರಂಗ ಮಾರ್ಗ ಹಮಾಸ್ ಭಯೋತ್ಪಾದಕರ ಸಂಪರ್ಕ ಜಾಲದ ಭಾಗವಾಗಿದ್ದು, ಇದು ನಾಲ್ಕು ಕಿಲೋ ಮೀಟರ್ ಗಿಂತಲೂ ಉದ್ದವಿದೆ. ಅಲ್ಲದೇ ಎರ್ರೆಝ್ ಬಾರ್ಡರ್ ಕ್ರಾಸಿಂಗ್ ನಿಂದ 400 (1,300) ಮೀಟರ್ ಗಳ್ಟು ಹತ್ತಿರದಲ್ಲಿದೆ ಎಂದು ವರದಿ ತಿಳಿಸಿದೆ.
ಸುರಂಗ ಮಾರ್ಗ ನಿರ್ಮಾಣಕ್ಕಾಗಿ ಲಕ್ಷಾಂತರ ರೂಪಾಯಿ ಹಣ ವ್ಯಯಿಸಲಾಗಿದ್ದು, ಇದಕ್ಕಾಗಿ ವರ್ಷಾನುಗಟ್ಟಲೇ ಕಾರ್ಯನಿರ್ವಹಿಸಲಾಗಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ ಪ್ರಕರಣದ ಮಾಸ್ಟರ್ ಮೈಂಡ್ ಮೊಹಮ್ಮದ್ ಯಾಹ್ಯಾಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ರೇಲ್ ಸೇನೆ ಬಿಡುಗಡೆ ಮಾಡಿರುವ ವಿಡಿಯೋ ಫೂಟೇಜ್ ನಲ್ಲಿ, ಇದನ್ನು ಹಮಾಸ್ ಚಿತ್ರೀಕರಿಸಿರುವುದಾಗಿ ತಿಳಿಸಿದ್ದು, ಸುರಂಗದೊಳಗೆ ಸಣ್ಣ ವಾಹನವನ್ನು ಓಡಿಸುತ್ತಿರುವುದು ವಿಡಿಯೋದಲ್ಲಿದೆ. ಅಷ್ಟೇ ಅಲ್ಲ ತಾತ್ಕಾಲಿಕ ಉಗ್ರಾಣವಿದ್ದು, ಕ್ರೂಡ್ ಪವರ್ ಟೂಲ್ಸ್ ಬಳಸಿ ಹಮಾಸ್ ಸುರಂಗ ಕೊರೆಯುವ ಕೆಲಸದಲ್ಲಿ ನಿರತರಾಗಿರುವುದು ಸೆರೆಯಾಗಿದೆ.
ಈ ಬೃಹತ್ ಸುರಂಗದೊಳಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, ಇದನ್ನು ದಾಳಿ ನಡಸಲು ಸಂಗ್ರಹಿಸಿ ಇಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್ ಸೇನಾಪಡೆ ಹಮಾಸ್ ನೆಲೆಗಳನ್ನು ಧ್ವಂಸಗೊಳಿಸಿದ್ದು, ಈಗ ಗಾಜಾಪಟ್ಟಿಯಲ್ಲಿ ಸೇನೆ ಕಾರ್ಯಾಚರಣೆ ನಡೆಸುತ್ತಿದೆ.