Advertisement
ಈ ಹಿಂದೆ ಶ್ರೀಗಳ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದ ಪ್ರೇಮಲತಾ ಹಾಗೂ ದಿವಾಕರಶಾಸಿŒ ದಂಪತಿ ಈ ದೂರು ನೀಡಿದ್ದು, ಅತ್ಯಾಚಾರ ಆರೋಪ ಸಂಬಂಧ ರಾಘವೇಶ್ವರ ಶ್ರೀಗಳ ವಿರುದ್ಧ ಗೌರಿ ಲಂಕೇಶ್ ತಮ್ಮ ಪತ್ರಿಕೆಯಲ್ಲಿ ಸರಣಿ ಲೇಖನಗಳನ್ನು ಪ್ರಕಟಿಸಿದ್ದರು. ಈ ಸಂಬಂಧ ಮಾನನಷ್ಟ ಮೊಕದ್ದಮೆ ಸಹ ದಾಖಲಾಗಿದೆ. ಹೀಗಾಗಿ ರಾಘವೇಶ್ವರ ಶ್ರೀಗಳೇ ಸುಪಾರಿ ಹಂತಕರಿಗೆ ಹಣ ಕೊಟ್ಟು ಕೃತ್ಯವೆಸಗಿರುವ ಸಾಧ್ಯತೆಯಿದೆ. ಈ ಕೋನದಲ್ಲಿಯೂ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
Related Articles
Advertisement
ಗೌರಿ ಲಂಕೇಶ್ ನನ್ನ ವಿರುದ್ಧ ಬರೆದ ಲೇಖನಗಳಿಗೂ ನಾನು ಪ್ರತಿಕ್ರಿಯೆ ನೀಡಿರಲಿಲ್ಲ. ಅದರ ಅಗತ್ಯವೂ ನನಗೆ ಇರಲಿಲ್ಲ. ಹೀಗಿರುವಾಗ ನನಗೂ ಗೌರಿ ಹತ್ಯೆಗೂ ಏನು ಸಂಬಂಧ? ಗೌರಿ ಲಂಕೇಶ್ ಸರ್ಕಾರ ಸೇರಿದಂತೆ ಕೆಲ ವ್ಯಕ್ತಿಗಳ ವಿರುದ್ಧ ತಮ್ಮ ಲೇಖನಗಳ ಮೂಲಕ ಟೀಕಿಸಿದ್ದಾರೆ. ಅವರನ್ನು ಸಹ ಎಸ್‌ಐಟಿ ವಿಚಾರಣೆ ನಡೆಸುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ಕೌಟುಂಬಿಕ ಕಲಹ ಇಲ್ಲಪ್ರಕರಣದಲ್ಲಿ ಕೌಟುಂಬಿಕ ಕಲಹ ಇಲ್ಲ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಎಲ್ಲ ಸಂಬಂಧಿಕರ ವಿಚಾರಣೆಯಲ್ಲಿ ಯಾವುದೇ ಗಲಾಟೆ ವಿಚಾರಗಳಿಲ್ಲವೆಂದು ಸ್ಪಷ್ಟವಾಗಿದೆ. ಅವರ ಆಸ್ತಿ ಹಂಚಿಕೆ ವಿಚಾರ ಗೊಂದಲ ಬಗೆ ಹರಿದಿದೆ. 2005ರಲ್ಲಿ ಸಹೋದರ ಇಂದ್ರಜಿತ್ ಲಂಕೇಶ್ ಪಿಸ್ತೂಲ್ ತೋರಿಸಿದ್ದ ಗಲಾಟೆ ಆಗಲೇ ಹಿರಿಯ ಸಮ್ಮುಖದಲ್ಲಿ ಮುಕ್ತಾಯವಾಗಿದೆ. ಘಟನೆ ಬಳಿಕ ಇಂದ್ರಜಿತ್ ಲಂಕೇಶ್ ಪಿಸ್ತೂಲ್ ಮಾರಾಟ ಮಾಡಿದ್ದರು. ಈ ದಾಖಲೆಗಳನ್ನು ಇದೀಗ ಇಂದ್ರಜಿತ್ ಲಂಕೇಶ್ ಎಸ್‌ಐಟಿಗೆ ತೋರಿಸಿದ್ದಾರೆ. ಇದೇ ವೇಳೆ ನೆಲಮಂಗಲದ ಆಸ್ತಿ ವಿಚಾರದಲ್ಲಿ ಗಲಾಟೆಯಾಗಿತ್ತು. ಬಳಿಕ ಇಂದ್ರಜಿತ್ ಸೂಚನೆ ಮೇರೆಗೆ ರಿಯಲ್ ಎಸ್ಟೇಟ್ ಉದ್ಯಮಿ ಅರುಣ್ ಗೌರಿಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿತ್ತು. ಆದರೆ, ತಾಯಿ ಇಂದಿರಾ ಅವರು ಮಧ್ಯ ಪ್ರವೇಶಿಸಿ ಗಲಾಟೆ ಇತ್ಯರ್ಥ ಪಡಿಸಿದ್ದರು. ಹೀಗಾಗಿ ಕೌಟುಂಬಿಕ ಪ್ರಕರಣದಲ್ಲಿ ಯಾವುದೇ ಘರ್ಷಣೆಗಳಿಲ್ಲ ಎಂಬುದು ತಿಳಿದು ಬಂದಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಆದರೆ ವಿಚಾರಣೆಗೆ ಹಾಜರಾಗಬೇಕಾದ ಅರುಣ್ ಮುಖ್ಯಮಂತ್ರಿ ಕಚೇರಿಯಿಂದ ಕರೆ ಮಾಡಿಸಿ ವಿಚಾರಣೆಯಿಂದ ರಿಯಾಯಿತಿ ಕೇಳಿಕೊಂಡಿದ್ದ ಎನ್ನಲಾಗಿದೆ. ಆದರೆ, ಇತ್ತ ಕರೆ ಸ್ವೀಕರಿಸಿದ ಎಸ್‌ಐಟಿ ಅಧಿಕಾರಿ, ದಯವಿಟ್ಟು ಅವರನ್ನು ವಿಚಾರಣೆಗೆ ಕಳುಹಿಸಿಕೊಡಿ. ನಾವು ಅವರನ್ನು ಬಂಧಿಸುವುದಿಲ್ಲ ಎಂದು ಹೇಳಲಾಯಿತು ಎನ್ನಲಾಗಿದೆ.