Advertisement
ಈಗಾಗಲೇ ನಮೃತಾ, ಕಾರ್ತಿಕ್, ತುಕಾಲಿ ಸಂತು, ವರ್ತೂರು ಸಂತೋಷ್, ಸಂಗೀತಾ ಹಾಗೂ ಸಿರಿ ಅವರ ಮನೆಯವರು ಬಿಗ್ ಬಾಸ್ ಮನೆಗೆ ಬಂದು ತಮ್ಮವರ ಜೊತೆ ಮಾತನಾಡಿ, ಮನೆಯವರೊಂದಿಗೆ ಒಂದಷ್ಟು ಹೊತ್ತು ಹರಟೆ ಹೊಡೆದು, ಮುಂದಿನ ಕ್ಯಾಪ್ಟನ್ ಯಾರಾಗಬೇಕೆನ್ನುವ ತಮ್ಮ ಅಭಿಪ್ರಾಯವನ್ನು ಹೇಳಿ ಹೋಗಿದ್ದಾರೆ.
Related Articles
Advertisement
ಪ್ರತಾಪ್ ಅವರ ʼಡ್ರೋನ್ʼ ವಿಚಾರ ನಡೆದ ಬಳಿಕ ಅವರು ತಂದೆ – ತಾಯಿಯಿಂದ ದೂರವಾಗಿದ್ದರು. ಹಳ್ಳಿಯ ಜನ ಹಾಗೂ ಕೆಲವರು ತನ್ನ ಮನೆಯವರಿಗೆ ನನ್ನ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿಕೊಟ್ಟಿದ್ದಾರೆ. ಈ ಕಾರಣದಿಂದ ಮೂರು ವರ್ಷಗಳಿಂದ ನಾನು ಮನೆಯವರ ಜೊತೆ ಮಾತನಾಡದೆ ದೂರವಾಗಿದ್ದೇನೆ ಎಂದು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹೇಳಿದ್ದರು. ಪ್ರತಾಪ್ ಅವರ ತಂದೆ ಮಗನ ಜೊತೆ ಫೋನ್ ನಲ್ಲಿ ಮಾತನಾಡಿದ್ದರು.
ಇದೀಗ ಮೂರು ವರ್ಷದ ಬಳಿಕ ತಂದೆ – ತಾಯಿಯನ್ನು ಪ್ರತಾಪ್ ಭೇಟಿ ಆಗಿದ್ದಾರೆ. ಅಪ್ಪ – ಮಗನ ಭೇಟಿಯನ್ನು ನೋಡಿ ಮನೆಯ ಇತರೆ ಸ್ಪರ್ಧಿಗಳು ಕೂಡ ಭಾವುಕರಾಗಿದ್ದಾರೆ.