Advertisement

ದರ್ಶನ್‌ ʼಡೆವಿಲ್‌ʼನಲ್ಲಿ ಬಿಗ್‌ಬಾಸ್‌ ಖ್ಯಾತಿಯ ವಿನಯ್‌ ಗೌಡ ನಟನೆ?: ಫ್ಯಾನ್ಸ್‌ ಥ್ರಿಲ್

05:14 PM Jun 06, 2024 | Team Udayavani |

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ʼಡೆವಿಲ್ʼ ಚಿತ್ರ ದಿನಕಳೆದಂತೆ ಅಭಿಮಾನಿಗಳ ವಲಯದಲ್ಲಿ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇದೆ.

Advertisement

ಇತ್ತೀಚೆಗಷ್ಟೇ ರಿಲೀಸ್‌ ಬಗ್ಗೆ  ಚಿತ್ರತಂಡ ಬಿಗ್‌ ಅಪ್ಡೇಟ್‌ ನೀಡಿತ್ತು. ಸದ್ಯ ಎರಡನೇ ಹಂತದ ಚಿತ್ರೀಕರಣಕ್ಕೆ ಸಿದ್ದವಾಗುತ್ತಿದೆ.  ದರ್ಶನ್‌ ಕೈಗೆ ಏಟಾಗಿದ್ದು ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ ʼಡೆವಿಲ್‌ʼ ಶೂಟಿಂಗ್‌ ಗೆ ರೆಡಿಯಾಗಿದೆ.

ʼತಾರಕ್ʼ ಚಿತ್ರದ ಬಳಿಕ ದರ್ಶನ್‌ ಅವರೊಂದಿಗೆ ಪ್ರಕಾಶ್‌ ವೀರ್‌ ಮತ್ತೆ ಕೈಜೋಡಿಸಿದ್ದಾರೆ. ಚಿತ್ರದ ಟೀಸರ್‌ ಸಖತ್‌ ಗಮನ ಸೆಳೆದಿದೆ.

ಈಗಾಗಲೇ ಚಿತ್ರದ ನಾಯಕಿ ಹಾಗೂ ಇತರೆ ಕೆಲ ಪಾತ್ರವರ್ಗ ಯಾರು ಎನ್ನುವುದು ಗೊತ್ತಾಗಿದೆ. ಇದೀಗ ಬಿಗ್‌ ಬಾಸ್‌ ಸೀಸನ್‌ -10 ನಲ್ಲಿ ದೊಡ್ಮನೆಯಲ್ಲಿ ʼಆನೆʼಯಾಗಿ ಅಬ್ಬರಿಸಿದ್ದ ವಿನಯ್‌ ಗೌಡ ʼಡೆವಿಲ್‌ʼ ನಲ್ಲಿ ನಟಿಸಲಿದ್ದಾರೆ ಎನ್ನುವ ಮಾತುಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿದೆ.

ವಿನಯ್‌ ಗೌಡ ಇನ್ಸ್ಟಾಗ್ರಾಮ್‌ ನಲ್ಲಿ ಫೋಟೋವೊಂದನ್ನು ಹಾಕಿದ್ದಾರೆ. ಅದರ ಕೆಳಗೆ ಹಾಕಿರುವ ಕ್ಯಾಪ್ಷನ್‌ ನೋಡಿ ಇಂಥದ್ದೊಂದು ಗುಸು ಗುಸು ಚರ್ಚೆ ಶುರುವಾಗಿದೆ.

Advertisement

“ದೊಡ್ಡ ಸುದ್ದಿಯೊಂದು ಬರಲಿದೆ. ನನ್ನ ಪ್ರಾಜೆಕ್ಟ್‌ ನ ಹೆಸರನ್ನು ನೀವು ಊಹಿಸಬಲ್ಲಿರಾ?” ಏನಿರಬಹುದು ಎಂದು ನಿಮಗೆ ಗೊತ್ತಿದರೆ ಕಮೆಂಟ್‌ ಮಾಡಿ ಎಂದು ವಿನಯ್‌ ಕೇಳಿದ್ದಾರೆ.

ಇದಕ್ಕೆ ಬಹುತೇಕರು ʼಡೆವಿಲ್‌ʼ ಇರಬಹುದು ಎಂದು ಕಮೆಂಟ್‌ ಮಾಡಿದ್ದಾರೆ. ʼಡೆವಿಲ್‌ʼ ಚಿತ್ರದ ಟೀಸರ್‌ ಬಿಜಿಎಂ ಹಾಕಿ ವಿನಯ್‌ ಪೋಸ್ಟ್‌ ಹಂಚಿಕೊಂಡಿದ್ದರು. ಹಾಗಾಗಿ ʼಡೆವಿಲ್‌ʼ ನಲ್ಲಿ ವಿನಯ್‌ ನಟಿಸಲಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿದೆ.

ವಿನಯ್‌ ಗೌಡ ದರ್ಶನ್‌ ಅಭಿಮಾನಿ ಎಂದು ಈ ಹಿಂದೆ ಹೇಳಿಕೊಂಡಿದ್ದರು. ಬಿಗ್‌ ಬಾಸ್‌ ಮನೆಯಲ್ಲಿ ಈ ಕಾರಣದಿಂದ ಅವರಿಗೆ ದರ್ಶನ್‌ ಫ್ಯಾನ್ಸ್‌ ಗಳು ಬೆಂಬಲವಾಗಿ ನಿಂತಿದ್ದರು.

ರಚನಾ ರೈ, ಅಚ್ಯುತ್‌ ಕುಮಾರ್‌ , ಮಹೇಶ್ ಮಂಜ್ರೇಕರ್ ಸೇರಿದಂತೆ ಇತರೆ ಪ್ರಮುಖರು ಕಾಣಿಸಿಕೊಳ್ಳಲಿದ್ದಾರೆ.

ಇದೇ ವರ್ಷದ ಕ್ರಿಸ್ಮಸ್‌ ಹಬ್ಬದ ಸಂದರ್ಭದಲ್ಲಿ ʼಡೆವಿಲ್‌ʼ ರಿಲೀಸ್‌ ಆಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next